ಚಮ್ಮಟಿಕೆ- ಲೇಖಕ, ಹೋರಾಟಗಾರ ವಿಕಾಸ್ ಆರ್ ಮೌರ್ಯ ಅವರ ಲೇಖನಗಳ ಸಂಕಲನ. ಇತ್ತೀಚಿನ ದಿನಗಳಲ್ಲಿ ವರ್ತಮಾನದ ಸಾಮಾಜಿಕ ಆಗುಹೋಗುಗಳ ಬಗ್ಗೆ ನಿರಂತರವಾಗಿ ಬರೆಯುತ್ತಿರುವ ವಿಕಾಶ್ ಮೌರ್ಯ, ಹೊಸತಲೆಮಾರಿನ ಪ್ರಖರ ಚಿಂತಕರಲ್ಲೊಬ್ಬರು. ಇದಕ್ಕೆ ಪುರಾವೆಯೆಂದರೆ ಕಳೆದ ಐದಾರು ವರ್ಷಗಳಿಂದ ಅವರು ಬರೆದ ಲೇಖನಗಳ ಸಂಕಲನಲವಾದ ಈ ಕೃತಿ. ಸರಳವೂ ನೇರವೂ ಸಂಹವನಶೀಲವೂ ಆದ ಭಾಷೆ, ಸಮಾಜದ ಬದಲಾವಣೆಯ ದಿಕ್ಕಿನಲ್ಲಿ ಚಿಂತಿಸಲು ಮತ್ತು ಕ್ರಿಯಾಶೀಲರಾಗಲು ಕರೆಗೊಡುವ ಸಂಕಲ್ಪ ತುಂಬಿದ ವಾಕ್ಯಗಳು. ಪ್ರಾಮಾಣಿಕವಾದ ವೇದನೆಯನ್ನೂ ಆಕ್ರೋಶವನ್ನು ಚಿಂತನೆಯಾಗಿ ಮಾರ್ಪಡಿಸುತ್ತಿರುವ ಸಂಯಮದ ಶೈಲಿ, ಎಚ್ಚರ ಮತ್ತು ಕನಸುಗಾರಿಕೆಯಿಂದ ಕೂಡಿದ ತರುಣ ಮನಸ್ಸು. ವರ್ತಮಾನದ ಇಂಡಿಯಾ ದಲಿತರನ್ನು ನಡೆಸಿಕೊಳ್ಳುತ್ತಿರುವ ಭೀಷಣ ವಾಸ್ತವವನ್ನು ಕಾಣಿಸುವಿಕೆ - ಇವು ಲೇಖನಗಳ ಹಿಂದಿರುವ ಮುಖ್ಯ ಚಹರೆಗಳು. ಈ ಲೇಖನಗಳಲ್ಲಿ ಕನ್ನಡ ಪ್ರಗತೀಪರ ಚಿಂತನೆ ಈಗಾಗಲೇ ಚರ್ಚಿಸಿರುವ ಎಳೆಗಳೇ ಇವೆ. ಆದರೆ ಇವುಗಳ ಹಿಂದಿನ ಬದ್ಧತೆ, ಕಳಕಳಿ, ತಲ್ಲಣ, ಪ್ರಾಮಾಣಿಕತೆಗಳು ಲೇಖನಗಳಿಗೆ ಹೊಸ ಜೀವಂತಿಕೆಯನ್ನು ಹಾಯಿಸಿವೆ.
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ತನ್ನ ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವ ಹೊಸ ತಲೆಮಾರಿನ ಬರಹಗಾರ ಮತ್ತು ಹೋರಾಟಗಾರ ವಿಕಾಸ್ ಆರ್ ಮೌರ್ಯ. ಹುಟ್ಟೂರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಹಳ್ಳಿ. ಬೆಳೆದದ್ದು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿ. ಗಣಿತ ಸ್ನಾತಕೋತ್ತರ ಪದವಿ ಮುಗಿಸಿರುವ ವಿಕಾಸ್ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಲೇಖನಗಳ ಸಂಗ್ರಹ ‘ಚಮ್ಮಟಿಕೆ’ ಕೃತಿಯನ್ನು ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಜೊತೆಗೆ ಆಫ್ರಿಕನ್ ಅಮೆರಿಕನ್ ಬರಹಗಾರ ಫೆಡರಿಕ್ ಡಾಗ್ಲಾಸ್ ನ ಆತ್ಮಕಥೆಯನ್ನು 'ಕಪ್ಪು ಕುಲುಮೆ' ಎಂಬ ಹೆಸರಿನಲ್ಲಿ ಕನ್ನಡೀಕರಿಸಿದ್ದಾರೆ. 'ಕಪ್ಪು ಕುಲುಮೆ'ಯನ್ನೂ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಹಾಗೇ 'ನೀಲವ್ವ' ...
READ MORE