ಅಹಲ್ಯಾತರಂಗ

Author : ಸಿ.ಬಿ.ಶೈಲಾ ಜಯಕುಮಾರ್

Pages 68

₹ 80.00




Year of Publication: 2018
Published by: ಹೆಚ್‌.ಎಸ್‌.ಆರ್‌.ಎ ಪ್ರಕಾಶನ
Phone: 7892793054

Synopsys

`ಅಹಲ್ಯಾಂತರಂಗ' ಕೃತಿಯು ಸಿ.ಬಿ.ಶೈಲಾ ಜಯಕುಮಾರ್ ಅವರ ಲೇಖನಸಂಕಲನವಾಗಿದೆ. ಸಮಾಜದ ಅನ್ಯಾಯ ಅಕ್ರಮಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಬರವಣಿಗೆಯ ಮೂಲಕ ಧ್ವನಿ ಎತ್ತಿದ್ದಾರೆ. ಅಹಲ್ಯಯ ಪಾತ್ರದ ಅಳಲಿನ "ಅಹಲ್ಯಾಂತರಂಗ", ಹೆಣ್ಣಿನ ಮೇಲಿನ ದೌರ್ಜನ್ಯದ ಕುರಿತ "ಅವತರಿಸು ಬಾ", ಆಧುನಿಕ ಜೀವನ ಶೈಲಿಯ ವಿಡಂಬನೆಯ "ಹೈಟೆಕ್", "ಆಷಾಡಭೂತಿತನವನ್ನು ಟೀಕಿಸುವ 'ಸಮರ್ಥನ" ವಿದ್ಯಾರ್ಥಿಗಳ ಸೋಮಾರಿತನ, ನಿರ್ಲಕ್ಷ್ಯವನ್ನು ಎಚ್ಚರಿಸುವ "ಪೂರಕ ಪರೀಕ್ಷೆ", ಉಳಿದವರನ್ನು ತುಳಿದರೂ ಸರಿ ತಾನು ಮುಂದೆ ಬರಬೇಕೆಂಬ ಮಹತ್ವಾಕಾಂಕ್ಷಿ "ಡೊಂಕುಬಾಲದವರು" ಹೀಗೆ ಇವರ ಕವನಗಳು ಅವರ ಚಿಂತನೆಯ ವಿಶಾಲ ಹರವನ್ನು ಬಿಂಬಿಸುತ್ತವೆ ಎನ್ನುತ್ತಾರೆ ಕೆ ಪಿ ಸತ್ಯನಾರಾಯಣ .

About the Author

ಸಿ.ಬಿ.ಶೈಲಾ ಜಯಕುಮಾರ್

ಸಿ.ಬಿ.ಶೈಲಾ ಜಯಕುಮಾರ್ ಅವರು ಮೂಲತಃ ಚಿತ್ರದುರ್ಗದವರು. MA (English) M Ed , Diploma in Journalism ನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅವರು ಜೂನ್‌ 2020 ರಲ್ಲಿ ನಿವೃತ್ತಿ ಹೊಂದಿದರು. ಚಿತ್ರದುರ್ಗದ ಲೇಖಕಿಯರ ಕಥಾಸಂಕಲನದ 'ಮೊದಲ ಹೆಜ್ಜೆ' ಕೃತಿಯ ಸಂಪಾದಕಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು : ನುಡಿಗನ್ನಡಿ (ಆಕಾಶವಾಣಿಯ ನಲ್ನುಡಿಗಳ ಸಂಕಲನ), ಅಹಲ್ಯಾಂತರಂಗ, ಏಕಸೂತ್ರದಲ್ಲಿ ಅನೇಕ (ವೈಚಾರಿಕ ಲೇಖನಗಳ ಸಂಕಲನ) , ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ರಸಪ್ರಶ್ನೆಗಳು, ಉತ್ತರೆಯ ಸ್ವಗತ, ಇವರು ಚಿರಂಜೀವಿಗಳು.(ಪುರಾಣಗಳ ಚಿರಾಯುಗಳ ಬಗ್ಗೆ), ಅಂತಃಕರಣದ ...

READ MORE

Related Books