‘ಶಿವಶಕ್ತಿ ಸಂಪುಟ’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಅವರ ಲೇಖನ ಸಂಕಲನ. ಎಲ್ಲ ಅನುಭಾವ, ಪ್ರಪಂಚವೂ ವೈಯಕ್ತಿಕ ತುರ್ತಿನಿಂದಲೇ ಮತ್ತು ವ್ಯಕ್ತಿವಿಶಿಷ್ಟ ಅನಿವಾರ್ಯಯತೆಯಾಗಿಯೇ ಪ್ರಕಟಗೊಳ್ಳುತ್ತವೆ. ಬದುಕಿನಲ್ಲಿ ವ್ಯಕ್ತಿಯು ಸಾಧಿಸಿಕೊಳ್ಳಬೇಕಾದ ಉನ್ನತ ವ್ಯಕ್ತಿತ್ವದ ಸಾಧನೆ ಇದು, ಆದ್ದರಿಂದ ವ್ಯಕ್ತಿಯ ಸಾಧನೆಯಾಗಿ ನೂರಕ್ಕೆ ನೂರು ಪಾಲು ಮೂರ್ತವಿದು, ಆದರೆ ಇಂಥ ಮೂರ್ತತೆಯು ಉಳಿದವರಿಗೆ ಅಂದರೆ- ಅಂಥ ಅನುಭವಗಳನ್ನು ಭಾಷೆಯ ಮೂಲಕ ತಿಳದುಕೊಳ್ಳುವವರಿಗೆ ಬಹುಶಃ ಅಮೂರ್ತವಾಗಿಯೇ ಉಳಿಯುತ್ತದೆ. ಅರ್ಥೈಸುವ ಗುರುವನ್ನು ಬೇಡದ ಈ ಮಾರ್ಗವು, ಸಾಧನೆಯಿಂದ ತಾನೇ ಗುರುವಾಗುವ, ತತ್ ಕ್ಷಣದಲ್ಲಿಯೇ ಶಿಷ್ಯನೂ ಆಗಿರುವ ನಿರಂತರ ಪ್ರಕ್ರಿಯೆಯನ್ನೇ ಬೇಡುತ್ತದೆ.
ಬಿದರಹಳ್ಳಿ ನರಸಿಂಹಮೂರ್ತಿ ಅವರ ಈ ಕೃತಿಯಲ್ಲಿಯ ಲೇಖನಗಳು ಇಂಥ ಹತ್ತು-ಹಲವು ಬಹುಮುಖ್ಯ ಸಂಗತಿಗಳನ್ನು ಬಿಚ್ಚಿಡಲು ಯತ್ನಿಸುತ್ತವೆ. ತೌಲನಿಕ ಅಧ್ಯಯನ ಹಾಗೂ ವಿಶ್ಲೇಷಣೆಗಳು ಇಲ್ಲಿಯ ಹಲವು ಲೇಖನಗಳಲ್ಲಿ ಕರ್ನಾಟಕದ ಅನುಭಾವ ಪರಂಪರೆಯ ಸ್ವರೂಪಗಳನ್ನು ಅರಿಯಲು ಅಗತ್ಯವಾದ ಸಾಧನವಾಗಿ ರೂಪುಗೊಂಡಿವೆ.
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE