ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆದ ಕೃತಿ-ಭಾರತ ತೀರ್ಥ. ಪೂರ್ವಾರ್ಜಿತ ಸಂಸ್ಕೃತಿ ಸ್ವರೂಪವನ್ನು ಮನದಟ್ಟು ಮಾಡಿಕೊಡುವುದು ಕೃತಿಯ ಉದ್ದೇಶ. ರಾಮಾಯಣ, ಮಹಾಭಾರತದಂತಹ ಮೂಲ ಮಹಾಕಾವ್ಯಗಳು ಧರ್ಮಗ್ರಂಥಗಳು ಎನಿಸಿದರೂ ಅವು ಲೌಕಿಕಗ್ರಂಥಗಳೇ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.
ಮಹಾಭಾರತದ ರಚನೆ. ಯಯಾತಿ-ಶಾಕುಂತಲಾ ಉಪಾಖ್ಯಾನಗಳು, ದಾಂಪತ್ಯದ ಎರಡು ಕಥೆ, ದುಶ್ಯಾಸನ, ಕರ್ಣ, ಧರ್ಮ ಉತ್ತಮ, ವ್ಯಕ್ತಿ ಸುಭಾಷಿತ, ಮದುವೆ, ಒಳ್ಳೆಯ ಆಡಳಿತ, ಯುದ್ಧದ ವಿಚಾರ, ಆದರ್ಶ ಮಾನವ... ಹೀಗೆ 41 ಶೀರ್ಷಿಕೆಗಳಡಿ ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳು ಅವರ ಅಧ್ಯಯನದ ಆಳ, ವಿಶ್ಲೇಷಣೆಯ ತೀಕ್ಷ್ಣ ಮತಿಯ ಸೂಕ್ಷ್ಮತೆಗೆ ಕನ್ನಡಿ ಹಿಡಿಯುತ್ತವೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE