ಲೇಖಕ ಸಂತೋಷ ಕುಮಾರ ಮೆಹೆಂದಳೆ ಬರೆದ ಕೃತಿ-ಕಾಶ್ಮೀರವೆಂಬ ಖಾಲಿ ಕಣಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಹಿಂಪಡೆದ ಹಿನ್ನೆಲೆಯಲ್ಲಿ ಅಲ್ಲಿಯ ಸ್ಥಿತಿಗತಿಗಳನ್ನು ತಿಳಿಸುವ ಬರೆಹಗಳು ಇಲ್ಲಿವೆ. ಭೂಮಿಯ ಮೇಲಿನ ಸ್ವರ್ಗ ಎಂದೇ ಖ್ಯಾತಿಯ ಕಾಶ್ಮೀರವು ಉಗ್ರಗಾಮಿಗಳ ತಾಣವಾಗಿದ್ದು, ದೇಶದ ಆಂತರಿಕ ಶಾಂತಿಯನ್ನು ಕದಡುತ್ತಿದೆ. ಅಲ್ಲಿಯ ಜನರ ನೆಮ್ಮದಿಯನ್ನು ಹದಗೆಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಂದರವಾದ ಕಾಶ್ಮೀರ ಹಾಳು ಸುರಿಯುತ್ತಿದೆ ಎಂಬ ಅರ್ಥದಲ್ಲಿ ಇಲ್ಲಿ ಬರೆಹಗಳಿವೆ.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MORE