‘ಹೆಣ್ಣು ಹೆಜ್ಜೆ’ ಸಾವಿತ್ರಿ ಮುಜುಮದಾರ ಅವರ ಕೃತಿಯಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ ಅವರು; ಈ ಕೃತಿಯಲ್ಲಿ ನಿರೂಪಿತವಾದ ಸತ್ಯ ಘಟನೆಗಳು ವ್ಯವಸ್ಥೆಯ ವಿಕೃತಿಗಳನ್ನು ನಮ್ಮ ಕಣ್ಣ ಮುಂದೆ ಕಡೆದು ನಿಲ್ಲಿಸುತ್ತವೆ; ಸಮಾಜದ ಆತ್ಮ ಸಾಕ್ಷಿಯನ್ನು ಕೆಣಕುತ್ತವೆ; ಪ್ರಶ್ನೆಯ ಪ್ರತೀಕವಾಗುತ್ತವೆ; ಪತ್ರಿರೋಧಕ್ಕೆ ಪ್ರೇರಣೆಯಾಗುತ್ತವೆ; ಕಡೆಗೆ ಆತ್ಮಾವಲೋಕನದ ಹಾದಿ ತೆರೆಯುತ್ತವೆ. ಸಾವಿತ್ರಿ ಮುಜುಮದಾರ ಅವರು ಕಟ್ಟಿ ಕೊಡುವ ವಿವಿಧ ಮಹಿಳೆಯರ ಸಮಸ್ಯೆ ಸವಾಲುಗಳ ಸರಣಿ ನಮ್ಮ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿದೆ. ಜೊತೆಗೆ ಲೇಖಕಿ, ಸ್ವತಃ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರೋಪಾಯಗಳ ಮೂಲಕ ಸಂತ್ರಸ್ಥ ಮಹಿಳೆಯರ ಪರವಾಗಿ ಮಾಡಿದ ಕೆಲಸ ಅವರ ಬಗ್ಗೆ ಗೌರವ ಮೂಡಿಸುತ್ತದೆ. ಸಾವಿತ್ರಿ ಮುಜುಮದಾರ ಅವರು ನಡೆಸಿದ ಮಹಿಳಾ ಪರ ಹೋರಾಟ ತನಗೆ ತಾನೆ ಒಂದು ಮಾದರಿಯಾಗಿದೆ. ಮಹಿಳೆಯರ ಬದುಕಿನ ನಿರ್ದಿಷ್ಟ ಸನ್ನಿವೇಶದ ನಿರೂಪಣೆಯು ಮುನ್ನೆಲೆಗೆ ಬರುವುದು, ಲೇಖಕಿ ಅದರೊಳಗೊಂದಾಗುವುದು ಈ ಪುಸ್ತಕದ ಪ್ರಧಾನ ಗುಣಲಕ್ಷಣವಾಗಿದೆ ಎಂದಿದ್ದಾರೆ.
©2025 Book Brahma Private Limited.