‘ಅಂಬೇಡ್ಕರ್ ಕಥನ’ ಲೇಖಕ ಎಚ್.ಟಿ. ಪೋತೆ ಅವರು ರಚಿಸಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತಾದ ಲೇಖನಗಳ ಸಂಕಲನ. ಈ ಕೃತಿಯಲ್ಲಿಯ ಎಲ್ಲ ಬರಹಗಳು ಒಂದಲ್ಲ ಒಂದು ವಿಧವಾಗಿ ಅಂಬೇಡ್ಕರ್ ಅವರ ಚಿತ್ರದಿಂದ, ವ್ಯಕ್ತಿತ್ವದಿಂದ, ಪ್ರಸಂಗದಿಂದ, ಕೂಡಿವೆ. ಅಂಬೇಡ್ಕರ್, ಇಲ್ಲಿರುವ ಎಲ್ಲ ಲೇಖನಗಳ ಕೇಂದ್ರ ಪ್ರತಿಮೆ. ಈ ಪ್ರತಿಮೆಯು ಅನೇಕ ಬಾರಿ ಬಂದು ಹೋಗುತ್ತಿರುತ್ತದೆ. ಅಂಬೇಡ್ಕರ್ ಕಥನ ಗ್ರಂಥದ ಎಲ್ಲ ಲೇಖನಗಳೂ ಒಳರಾಕ್ಷಸನನ್ನು ಹತಗೊಳಿಸಲು, ನಿಷ್ಕ್ರಿಯಗೊಳಿಸಲು, ಅನಾವರಣಗೊಳಿಸಲು, ಯತ್ನಿಸುವ ದಿಕ್ಕಿನತ್ತ ಸಾಗುತ್ತವೆ. ಇದು ವರ್ತಮಾನದ ಕನ್ನಡಿಯೂ ಹೌದು! ನಾವು ವರ್ತಮಾನವನ್ನು ತಿಳಿಯಬೇಕಾದರೆ, ಭೂತವನ್ನು ಹೊಕ್ಕು ಬರುವುದು ಅನಿವಾರ್ಯ. ಈ 'ಭೂತ'ವು ಅನೇಕ ರೂಪಗಳನ್ನು ಧರಿಸಿಕೊಂಡೇ ಇರುತ್ತದೆ! ಅದು ಇರುವುದು ಮಾತ್ರವಲ್ಲ, ಅಡಗಿಕೊಂಡು ಇರುತ್ತದೆ. ಇಂಥ 'ಅಡಗುತಾಣ'ಗಳನ್ನು ಅನಾವರಣಗೊಳಿಸುವುದು ಕಷ್ಟಸಾಧ್ಯದ ಕೆಲಸ. ಇದಕ್ಕೆ ಇತಿಹಾಸಶಾಸ್ತ್ರ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮನಃಶಾಸ್ತಗಳ ತಿಳಿವಳಿಕೆ ಬೇಕು. ಭೂತದೊಳಗಿನ ಸತ್ಯದ ನೆಲೆ ತಿಳಿದರೆ; ಭವಿಷ್ಯದ 'ರೂಪಕ'ವನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯ. ಎಂಬ ವಿಚಾರವೇ ಇಲ್ಲಿಯ ಲೇಖನಗಳಿಗೆ ಸ್ಪೂರ್ತಿ.
ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...
READ MORE