‘ಸಖೀಗೀತ’ ಚಿತ್ರರಂಗದ ಜನಪ್ರಿಯ ನಟ-ನಟಿ, ನಿರ್ದೇಶಕರ ದಾಂಪತ್ಯ ಜೀವನಗಾಥೆ. ಜ್ಯೋತಿ ಬೊಮ್ಮನಹಳ್ಳಿ ಅವರು ಸಂಯುಕ್ತ ಕರ್ನಾಟಕದಲ್ಲಿ ಬರೆಯುತ್ತಿದ್ದ ಸರಣಿ ಬರಹಗಳ ಸಂಕಲನ. ಸತಿಪತಿಗಳೊಂದಾದ ಭಕ್ತಿ ಶಿವನಿಗೆ ಹಿತವಪ್ಪುವುದೆಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಒಂದಾದ ದಂಪತಿಗಳ ಸಖೀಗೀತಗಳನ್ನು ಲೇಖಕಿ ಬರಹಗಳಲ್ಲಿ ದಾಖಲಿಸಿದ್ದಾರೆ. ಹಲವಾರು ಸಂಸಾರಿಕ ಕತೆಗಳಿದ್ದರೂ ಒಂದರಂತೆ ಒಂದಿಲ್ಲ. ಅಥವಾ ಒಂದಕ್ಕಿಂತ ಒಂದು ಚಂದವಾದ ಸಖೀಗೀತ.
ಲೇಖಕಿ ಜ್ಯೋತಿ ಬೊಮ್ಮನಹಳ್ಳಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿಯವರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಎಂ.ಎ (ಇಂಗ್ಲಿಷ್) ಪದವೀಧರರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದರು. ಸದ್ಯ, ಸ್ವಂತ ಉದ್ಯಮದಲ್ಲಿ ತೊಡಗಿಕೊಂಡಿರುವ ಜ್ಯೋತಿ ಅವರು ‘ಸಖೀಗೀತ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಗಾಗಿ ಬರೆಯುತ್ತಿದ್ದ ವಿಶೇಷ ಅಂಕಣ ಬರಹಗಳ ಸಂಕಲನವಿದು. ...
READ MORE