ಸಾಹಿತ್ಯ ಸಂಪದ

Author : ಅಂಶಿ ಪ್ರಸನ್ನಕುಮಾರ್‌

Pages 260

₹ 300.00




Published by: ವಿಸ್ಮಯ ಬುಕ್ ಹೌಸ್
Address: #1542, ಒಂದನೆ ಮಹಡಿ, ಸಿ ಮತ್ತು ಡಿ ಬ್ಲಾಕ್, ಅನಿಕೇತನ್ ರೋಡ್, ಎ ಟು ಝಡ್ ಸೂಪರ್ ಮಾರ್ಕೆಟ್ ಎದುರುಗಡೆ, ಕುವೆಂಪುನಗರ, ಮೈಸೂರು.
Phone: 8050302424

Synopsys

ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್‌ ಅವರ ಈ ಕೃತಿ ಸಾಹಿತ್ಯ ಜಗತ್ತಿಗೊಂದು ಪುಟ್ಟ ಕೈಪಿಡಿ. ಮುನ್ನುಡಿಯಲ್ಲಿ ಸಿ.ಪಿ.ಕೆ ಹೇಳುವಂತೆ ಒಂದು ಅಪರೂಪದ ಕೃತಿ. ಇದನ್ನು ಯಾವ ರೂಪಕ್ಕೆ ಸೇರಿಸಬೇಕೆಂದು ಹೇಳುವುದು ಕಷ್ಟ. ಇಲ್ಲಿ ವ್ಯಕ್ತಿ ಪರಿಚಯವಿದೆ. ಸಾಹಿತ್ಯದ ಕೃತಿಗಳ ಕಿರುನೋಟವಿದೆ. ಕಾದಂಬರಿ, ಕಥೆ, ಕವಿತೆಗಳ ಸಣ್ಣ ಪರಿಚಯವಿದೆ. ಒಟ್ಟಾರೆಯಾಗಿ ನಾಡಿನ ವಿವಿಧ ಲೇಖಕರು, ಸಾಹಿತಿಗಳ ಕೃತಿಗಳನ್ನು ಪರಿಚಯಿಸಿಕೊಡುವ ಕೃತಿ ಎನ್ನಬಹುದು.ಸುಮಾರು 160 ಭಿನ್ನವಾದ ಕೃತಿಗಳ ಪರಿಚಯ ಇದರಲ್ಲಿದೆ. ಇನ್ನೊಂದು ವಿಶೇಷವೆಂದರೆ ಅಷ್ಟೇನೂ ಜನಪ್ರಿಯವಲ್ಲದ, ಗಂಭೀರವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಾಕಷ್ಟು ಹೊಸ ಲೇಖಕರನ್ನು ಪರಿಚಯಿಸಿದ್ದಾರೆ. ಪ್ರತಿ ಪುಟದಲ್ಲೊಂದು ಹೊಸ ಕೃತಿ, ಲೇಖಕ, ಪ್ರಕಾಶಕರ ವಿವರ ಹೊಂದಿರುವ ಪರಿಚಯಾತ್ಮಕ ಲೇಖನವಿದೆ. ಸಾಹಿತ್ಯ, ವ್ಯಕ್ತಿ/ಜೀವನ ಚಿತ್ರಗಳು, ಕಾದಂಬರಿಗಳು,ಕಥೆಗಳು, ಕವಿತೆಗಳು, ಜಾನಪದ, ಲಲಿತ ಪ್ರಬಂಧಗಳು/ಲೇಖನಗಳು, ಪ್ರವಾಸ, ಆರೋಗ್ಯ, ಇತರೆ ಎಂಬ ಪ್ರತ್ಯೇಕ ವಿಭಾಗದಡಿಯಲ್ಲಿ ಆಯಾ ಕೃತಿಗಳನ್ನು ಪರಿಚಯಿಸಲಾಗಿದೆ.ಚಾಮರಾಜನಗರದ ವೆಂಕಟರಮಣ ಶಾಸ್ತ್ರಿಗಳು ಬರೆದ ‘ಲೋಕಸೇವಾನಿರತ ಅಂಬಳೆ ಅಣ್ಣಯ್ಯ ಪಂಡಿತರ ಚರಿತ್ರೆ’ ಎಂಬ ಕೃತಿಯನ್ನು ಅಂಶಿ ಇಲ್ಲಿ ಪರಿಚಯಿಸುತ್ತಾರೆ. ಮೈಸೂರಿನಲ್ಲಿ ಅಣ್ಣಯ್ಯ ಪಂಡಿತರ ವೃತ್ತವಿದೆ. ನಗರ ಪಾಲಿಕೆ ನಿರ್ವಹಿಸುವ ಉಚಿತ ವಿದ್ಯಾರ್ಥಿನಿಲಯವಿದೆ. ಆದರೆ ಪಂಡಿತರು ಯಾರೆಂದು ಬಹುತೇಕರಿಗೆ ಗೊತ್ತಿಲ್ಲ. ಅವರನ್ನು ಪರಿಚಯ ಮಾಡಿಕೊಡುವ ಕೃತಿಯನ್ನು ತಮ್ಮ ಪುಸ್ತಕದಲ್ಲಿ ಅಂಶಿ ಮಾಡಿದ್ದಾರೆ ಮತ್ತು ಈ ಕೆಲಸ ಬಹಳ ಸೊಗಸಾಗಿದೆ.ತ.ಸು.ಶಾಮರಾಯರ ವಿಭಿನ್ನ ಕೃತಿ ‘ನೆನಪಿನ ಅಲೆಗಳು’, ಡಾ.ಪ್ರಧಾನ್‌ ಗುರುದತ್ತರ ‘ಅನುವಾದ–ಆಧುನಿಕ ಜಗತ್ತಿನಲ್ಲಿ’ ಕೃತಿ ಕುರಿತಾದ ಸೊಗಸಾದ ಪರಿಚಯವಿದೆ. ಪ್ರೊ ಮಲ್ಲೇಪುರಂ ಜಿ.ವೆಂಕಟೇಶ ಅವರ ‘ತೌಲನಿಕ ಸಾಹಿತ್ಯಾಧ್ಯಯನ’ ಕೃತಿಯ ಪರಿಚಯವಿದೆ. ಅದೇ ರೀತಿ ಡಾ.ದೊಡ್ಡರಂಗೇಗೌಡರ ಭಾವಗೀತೆಗಳ ಸಂಕಲನ ‘ಗಂಧವತೀ ಪೃಥ್ವೀ’ ಕುರಿತಾದ ಒಂದು ಪರಿಚಯ ಲೇಖನವಿದೆ. ಬಹಳ ವಿರಳವಾಗಿ ಹೆಸರು ಕೇಳಿರುವ, ಆದರೆ ಗಟ್ಟಿಯಾದ ಸಾಹಿತ್ಯ ಕೃತಿ ರಚಿಸಿರುವ ಅನೇಕ ಲೇಖಕರನ್ನು ಈ ಪುಸ್ತಕದಲ್ಲಿ ಅಂಶಿ ಪರಿಚಯಿಸಿಕೊಟ್ಟಿದ್ದಾರೆ. ರಾಜ್ಯದ ಒಂದಷ್ಟು ಪ್ರಕಾಶಕರ, ಲೇಖಕರ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಆಯ್ದ ಬರಹಗಾರರ ಕುರಿತಾದ ಸಣ್ಣ ಮಾಹಿತಿಗೆ ಕೈಪಿಡಿಯಂತಹ ಕೃತಿ ಇದಾಗಿದೆ.

About the Author

ಅಂಶಿ ಪ್ರಸನ್ನಕುಮಾರ್‌

ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು  ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್‌ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...

READ MORE

Related Books