ಪ್ರಸ್ತಾವನೆ ಸಂವಿಧಾನ ಓದಿಗೊಂದು ಕೈದೀವಿಗೆ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 48

₹ 45.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
Address: ಶರವತಿ , ಬಲ್‌ಮಟ, ಮಂಗಳೂರು 575 001
Phone: 9480686859

Synopsys

”ಪ್ರಸ್ತಾವನೆ ಸಂವಿಧಾನ ಓದಿಗೊಂದು ಕೈದೀವಿಗೆ ’ಪುಸ್ತಕವು ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ಕೃತಿಯಾಗಿದೆ. ಭಾರತ ಸಂವಿಧಾನ ಸರಕಾರದ ಯಂತ್ರವನ್ನು ಸ್ಥಾಪಿಸುವ ಕಾನೂನುಗಳು ಮತ್ತು ನಿಯಮಗಳ ಒಂದು ಸಮೂಹ. ಸರಕಾರದ ವಿವಿಧ ಸಂಸ್ಥೆಗಳು ಮತ್ತು ಘಟಕಗಳ ನಡುವಿನ ಸಂಬಂಧಗಳನ್ನು ಅದು ವ್ಯಾಖ್ಯಾನಿಸುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಸ್ವರೂಪವನ್ನು ಮತ್ತು ಅವುಗಳ ಕರ್ತವ್ಯಗಳನ್ನು ನಿರೂಪಿಸುತ್ತದೆ. ಒಕ್ಕೂಟ ಸರಕಾರ, ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸರಕಾರಗಳ ಅಂತರ್ ಸಂಬಂಧವನ್ನು ಅದು ಸ್ಥಾಪಿಸುತ್ತದೆ. ಸಹಜವಾಗಿಯೇ ಇದರ ಭಾಷೆ ಹೆಚ್ಚು ಕ್ಲಿಷ್ಟಕರವಾಗಿರುತ್ತದೆ. ಇದನ್ನು ಕನ್ನಡ ಭಾಷೆಯಲ್ಲಿ ಓದಿದರೂ ಅರ್ಥ ವಾಗುವುದು ಕಷ್ಟ. ಇದನ್ನು ಸುಲಭಗೊಳಿಸುವುದು ಅದರ ಪ್ರಸ್ತಾವನೆ. ಅದನ್ನು ಇಲ್ಲಿ ಎಲ್ಲರಿಗೂ ಮನದಟ್ಟಾಗುವಂತೆ ವಿವರಿಸಲಾಗಿದೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Related Books