ದಂತಕಥೆಯಾದ ದಂತಚೋರ

Author : ಡಿ.ವಿ. ಗುರುಪ್ರಸಾದ್

Pages 340

₹ 250.00




Year of Publication: 2020
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

‘ದಂತಕಥೆಯಾದ ದಂತಚೋರ’ ನಿವೃತ್ತ ಡಿಜಿಪಿ, ಲೇಖಕ ಡಿ.ವಿ. ಗುರುಪ್ರಸಾದ್ ಅವರು ವೀರಪ್ಪನ್ ಕುರಿತು ಬರೆದಿರುವ ಕೃತಿ. ಆಪರೇಷನ್ ವೀರಪ್ಪನ್ ನಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಭಾಗವಹಿಸಿದ್ದ ನೂರಾರು ವ್ಯಕ್ತಿಗಳನ್ನು ಸಂದರ್ಶಿಸಿ, ಒಟ್ಟು ವಿದ್ಯಮಾನದ ಹಲವಾರು ಪ್ರದೇಶಗಳಿಗೆ ಭೇಟಿ ಮಾಡಿ ವಿಶಿಷ್ಟ ರೀತಿಯಲ್ಲಿ ರಚಿಸಿರುವ ಕೃತಿ ಇದು. ಯಾವುದೇ ರಾಗ-ದ್ವೇಷವಿಲ್ಲದೇ ವೀರಪ್ಪನ್ ವ್ಯಕ್ತಿತ್ವವನ್ನು ಅವನ ಎಲ್ಲ ಓರೆ-ಕೋರೆಗಳ ಸಹಿತ ನಮ್ಮ ಮುಂದೆ ಪ್ರಸ್ತುತ ಪಡಿಸಲಾಗಿರುವ ಪುಸ್ತಕವಿದು. ಮುಂದಿನ ಪೀಳಿಗೆಗೆ ವೀರಪ್ಪನ್ ಯಾರು, ಅವನ ಕಾರ್ಯಾಚರಣೆ ಎಂತಹದಿತ್ತು, ಅವನ ವೈಯಕ್ತಿಕ ಬಲಗಳೇನು, ದೌರ್ಬಲ್ಯಗಳೇನು, ಅಟ್ಟಹಾಸಕ್ಕೆ ಕಾರಣಗಳೇನು, ಪೊಲೀಸ್ ಕಾರ್ಯಾಚರಣೆಯಲ್ಲಿ ಇದ್ದ ಕೊರತೆಗಳೇನು, ವೀರಪ್ಪನ್ ಹಿಡಿಯಲು ಅಷ್ಟು ಕಷ್ಟವಾದದ್ದೇಕೆ. ಈ ಎಲ್ಲ ವಿಚಾರಗಳನ್ನು ಪ್ರತ್ಯಕ್ಷದರ್ಶಿಗಳ ನೇರ ಮಾತುಗಳಲ್ಲೇ ಪರಿಚಯಿಸಿದ್ದಾರೆ. ಮತ್ತೊಬ್ಬ ವೀರಪ್ಪನ್ ಮುಂದೆ ಬರದಂತೆ ಹೇಗೆ ಸಮಾಜ- ಸರಕಾರ ನೋಡಿಕೊಳ್ಳಬೇಕು ಎಂಬುದರ ಸುಳಿವೂ ಈ ಪುಸ್ತಕದಲ್ಲಿ ದೊರಕುತ್ತದೆ.

About the Author

ಡಿ.ವಿ. ಗುರುಪ್ರಸಾದ್

ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ.  ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...

READ MORE

Related Books