ಬಸವ ಧರ್ಮ ಯಾರ ಸೊತ್ತು? ಕುಮಾರ ಕಕ್ಕಯ್ಯ ಪೋಳ ಅವರ ಲೇಖನವಾಗಿದೆ. ಜಾತಿರಹಿತ ಸಮಾಜ ನಿರ್ಮಾಣದ ಧ್ಯೇಯವಿರಿಸಿ ಮಾನವನ ಕಲ್ಯಾಣಕ್ಕಾಗಿ ಸ್ಥಾಪಿತವಾದ ಬಸವ ಧರ್ಮವು ಇಂದು ಪೋಷಕರ - ಕುಟಿಲ ಸಮಯ ಸಾಧಕರ ಪಾಲಾಗಿರುವುದನ್ನು ಈ ವೈಚಾರಿಕ ಕೃತಿಯಲ್ಲಿ ಲೇಖಕರು ಪ್ರಸ್ತಾಪಿಸಿ ಬಸವ ಧರ್ಮದ ನಿಜವಾದ ವಾರಸುದಾರರು ಯಾರು ? ಎಂಬ ಮಹತ್ವದ ಪ್ರಶ್ನೆಯನ್ನೆತ್ತಿ ಚರ್ಚಿಸಿದ್ದಾರೆ. ಸಮಾಜದ ಉದ್ಧಾರಕ್ಕೆ ಅಡ್ಡಿಯಾಗಿರುವ ಯೋಗ್ಯರಲ್ಲದ ಅನೇಕ ಮಠಾಧೀಶರನ್ನೂ ಸಂಪ್ರದಾಯವಾದಿಗಳನ್ನೂ ಟೀಕಿಸಿದ್ದಾರೆ.
ಹಿರಿಯ ಲೇಖಕ ಕುಮಾರ ಕಕ್ಕಯ್ಯ ಪೋಳ್ ಅವರು ಶರಣ ಸಂಪ್ರದಾಯಸ್ಥರು. ವಚನಗಳ ಆಶಯವೇ ಜೀವನ ಶೈಲಿಯಾಗಿಸಿಕೊಂಡವರು. ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದವರು. ಬಿ.ಎಸ್. ಪೋರ್ಳ ಎಂಬುದು ಇವರ ಮೂಲ ಹೆಸರು. ಕುಮಾರ ಕಕ್ಕಯ್ಯ ಪೋಳ್ ಎಂಬುದು ಕಾವ್ಯನಾಮ. ತಂದೆ ಸಾಯಬಣ್ಣ, ತಾಯಿ ರಾಯವ್ವ. ಗಾಂಧೀಜಿ ಅನುಯಾಯಿಗಳಾಗಿ ಸ್ವಾತಂತ್ಯ್ರ ಹೋರಾಠದಲ್ಲಿ ಧುಮುಕಿದ್ದರು. ಪೊಲೀಸರಿಂದ ಅವಮಾನ-ಹಿಂಸೆಗಳನ್ನು ಅನುಭವಿಸಿದರು. ಸಿಂದಗಿಯಲ್ಲಿ 7 ತರಗತಿಯವರೆಗೆ ಓದಿದರು. ನಂತರ, ವಿಜಯಪುರದ ಶ್ರೀ ಸಿದ್ದೇಶ್ವರ ಹೈಸ್ಕೂಲ್ ಸೇರಿ 9 ಹಾಗೂ 10 ತರಗತಿ ಪಾಸು ಮಾಡಿದರು. ತದನಂತರ, ಮುಂಬೈನ ಸೆಕೆಂಡರಿ ಸ್ಕೂಲ್ ...
READ MORE