‘ಅಸ್ಪೃಶ್ಯತೆ’ ಮಂಗ್ಳೂರ ವಿಜಯ ಅವರ ‘ಹುಟ್ಟು, ವ್ಯಾಪ್ತಿ, ಮತ್ತು ಪರಿಣಾಮ ವಿಚಾರವನ್ನೊಳಗೊಂಡ ಲೇಖನ ಸಂಕಲನವಾಗಿದೆ. ಇಲ್ಲಿ ಅಸ್ಪೃಶ್ಯತೆಯ ಕುರಿತ ಹಲವಾರು ವಿಚಾರಗಳನ್ನು ಲೇಖಕರು ವಿವರಿಸುತ್ತಾರೆ. ಹಿಂದೂ ಸಮಾಜ ವ್ಯವಸ್ಥೆಯಲ್ಲಿ ಜಾತಿ ಪದ್ಧತಿಯ ಅಡಿಯಲ್ಲಿ ದೌರ್ಜನ್ಯಕ್ಕೊಳಗಾದವರು ಮತ್ತು ಅವರ ಮೇಲೆ ಕ್ರೂರ ದಬ್ಬಾಳಿಕೆ ಮಾಡಿದವರು ಭಾರತದ ಹಿಂದೂ ಧರ್ಮದವರೇ, ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ಪ್ರತಿಭಟಿಸಿದ್ದು ಮತ್ತು ಹಿಂದೂ ಧರ್ಮ ತೊರೆದು ಹೋದದ್ದು ಬಿ. ಆರ್. ಅಂಬೇಡ್ಕರ್ ಎಷ್ಟು ನೊಂದಿದ್ದರೆಂಬುದನ್ನು ತಿಳಿಸುತ್ತದೆ. ಅಂಬೇಡ್ಕರವರ ಭಾಷಣಗಳು ಪರಿಣಾಮಕಾರಿಯಾಗಿ ದಲಿತ-ಅಸ್ಪೃಶ್ಯರ ಬಗೆಗಿನ ಈ ಅನಿಷ್ಟ ಸಂಪ್ರದಾಯ ಕೊನೆಗೊಳಿಸಲು ಎಲ್ಲ ಪ್ರಯತ್ನಗಳಾದವು. ಬ್ರಿಟಿಷರ ಆಡಳಿತದ ಕಾಲದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯುಂಟಾಗಿ ಸಮಾಜ ಸುಧಾರಣೆಗಾಗಿ ಎಲ್ಲ ಕ್ರಮ ಕೈಗೊಳ್ಳಲಾಯಿತು. ಜಾತಿಪದ್ಧತಿಯು ವಿವಿಧ ಹಂತ, ಸ್ತರಗಳಲ್ಲಿ ಒಂದು ಏಣಿಯ ಮೆಟ್ಟಿಲುಗಳಂತೆ ವಿನ್ಯಾಸಗೊಂಡಿದ್ದರಿಂದ ಬದಲಾವಣೆ ಅಷ್ಟು ಸುಲಭಸಾಧ್ಯ ಎರಲಿಲ್ಲ. ಸಂವಿಧಾನದ ಮೂಲಕ ತಂದ ಸುಧಾರಣೆ ಕಾಟಾಚಾರಕ್ಕೆ ಎಂಬಂತೆ ದಲಿತರಿಗೆ ಹಕ್ಕುಗಳನ್ನು ಕೊಟ್ಟಿತೇ ವಿನಾ ಹಿಂದೂ ಸವರ್ಣಿಯ ಮನಸ್ಸುಗಳು ಬದಲಾಗಲಿಲ್ಲ. ಹಳ್ಳಿ ಪ್ರದೇಶಗಳಲ್ಲಿ ಇಂದಿಗೂ ಸವರ್ಣಿಯರ ಮನೆ ಊರ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಹೀಗೆ ದಲಿತ ವಿರೋಧಿ ಇರುವಂತಹ ಹಲವಾರು ವಿಚಾರಗಳಿಗೆ ಈ ಕೃತಿಯು ಧ್ವನಿಯಾಗಿದೆ.
ಹಿರಿಯ ಲೇಖಕ, ಚಿಂತಕ ಮಂಗ್ಳೂರು ವಿಜಯ ಅವರು ಮೂಲತಃ ಮಂಗಳೂರಿನವರು. ಸಂವಿಧಾನಾತ್ಮಕ ಆಶಯಗಳನ್ನೇ ಬದುಕಾಗಿಸಿಕೊಂಡು, ಹಲವಾರು ಕಾರ್ಯಗಾರ, ಶಿಬಿರ ಶಾಲೆಗಳಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಆಂಧ್ರ ಪ್ರದೇಶ ಮೂಲ ಚಿಂತಕ ‘ಕಾಂಚ ಐಲಯ್ಯ’ ಅವರ ಕೃತಿಯನ್ನು‘ನಾನೇಕೆ ಹಿಂದೂ ಅಲ್ಲ’ ಎನ್ನುವ ಶೀರ್ಷಿಕೆಯಡಿ ಅನುವಾದಿಸಿದ್ಧಾರೆ. ಈ ಕೃತಿಯನ್ನು ಲಡಾಯಿ ಪ್ರಕಾಶನ ಪ್ರಟಿಸಿದೆ. ...
READ MORE(ಹೊಸತು, ಸಪ್ಟೆಂಬರ್ 2012, ಪುಸ್ತಕದ ಪರಿಚಯ)
ನಮ್ಮ ದೇಶದ ಜನತೆಗೆ ಅಸ್ಪೃಶ್ಯರು ಯಾರೆಂದು ಹೊಸದಾಗಿ ಪಂಚಯಿಸಬೇಕಿಲ್ಲ. ಹಿಂದೂ ಸಮಾಜ ವ್ಯವಸ್ಥೆಯಲ್ಲಿ ಜಾತಿ ಪದ್ಧತಿಯ ಅಡಿಯಲ್ಲಿ ದೌರ್ಜನ್ಯಕ್ಕೊಳಗಾದವರು ಮತ್ತು ಅವರ ಮೇಲೆ ಕ್ರೂರ ದಬ್ಬಾಳಿಕೆ ಮಾಡಿದವರು ಭಾರತದ ಹಿಂದೂ ಧರ್ಮದವರೇ, ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ಪ್ರತಿಭಟಿಸಿದ್ದು ಮತ್ತು ಹಿಂದೂ ಧರ್ಮ ತೊರೆದು ಹೋದದ್ದು ಬಿ. ಆರ್. ಅಂಬೇಡ್ಕರ್ ಎಷ್ಟು ನೊಂದಿದ್ದರೆಂಬುದನ್ನು ತಿಳಿಸುತ್ತದೆ. ಅಂಬೇಡ್ಕರವರ ಭಾಷಣಗಳು ಪರಿಣಾಮಕಾರಿಯಾಗಿ ದಲಿತ-ಅಸ್ಪೃಶ್ಯರ ಬಗೆಗಿನ ಈ ಅನಿಷ್ಟ ಸಂಪ್ರದಾಯ ಕೊನೆಗೊಳಿಸಲು ಎಲ್ಲ ಪ್ರಯತ್ನಗಳಾದವು. ಬ್ರಿಟಿಷರ ಆಡಳಿತದ ಕಾಲದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯುಂಟಾಗಿ ಸಮಾಜ ಸುಧಾರಣೆಗಾಗಿ ಎಲ್ಲ ಕ್ರಮ ಕೈಗೊಳ್ಳಲಾಯಿತು. ಜಾತಿಪದ್ಧತಿಯು ವಿವಿಧ ಹಂತ, ಸ್ತರಗಳಲ್ಲಿ ಒಂದು ಏಣಿಯ ಮೆಟ್ಟಿಲುಗಳಂತೆ ವಿನ್ಯಾಸಗೊಂಡಿದ್ದರಿಂದ ಬದಲಾವಣೆ ಅಷ್ಟು ಸುಲಭಸಾಧ್ಯ ಎರಲಿಲ್ಲ. ಸಂವಿಧಾನದ ಮೂಲಕ ತಂದ ಸುಧಾರಣೆ ಕಾಟಾಚಾರಕ್ಕೆ ಎಂಬಂತೆ ದಲಿತರಿಗೆ ಹಕ್ಕುಗಳನ್ನು ಕೊಟ್ಟಿತೇ ವಿನಾ ಹಿಂದೂ ಸವರ್ಣಿಯ ಮನಸ್ಸುಗಳು ಬದಲಾಗಲಿಲ್ಲ. ಹಳ್ಳಿ ಪ್ರದೇಶಗಳಲ್ಲಿ ಇಂದಿಗೂ ಸವರ್ಣಿಯರ ಮನೆ ಊರ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಒಮ್ಮೆ ಹಿಮ್ಮೆಟ್ಟಿದಂತೆನಿಸಿದ ಈ ಪಿಡುಗು ಮತ್ತೆ ಹೊಸ ಮುಖ ತೋರಿಸುತ್ತಿದೆ. ದೇಶದೆಲ್ಲಡೆ ಅಂದು ಕಳವರ್ಗದ ಎಲ್ಲ ದಮನಿತರನ್ನು ಸವರ್ಣಿಯರು ನಡೆಸಿಕೊಂಡ ಪರಿಯನ್ನು ಅಂಬೇಡ್ಕರ್‌ರವರ ಭಾಷಣಗಳಿಂದ ಆಯ್ದು ಇಲ್ಲಿ ಕೊಡಲಾಗಿದೆ.