‘ಪ್ರಜಾ ರಕ್ಷಕರೇ ಭಕ್ಷಕರಾದರೇ..?’ ಜಿ.ಎಸ್. ಗೋನಾಳ ಅವರ ಕೃತಿಯಾಗಿದೆ. ಈ ಕೃತಿಗೆ ಬಿ.ಎಸ್. ಪಾಟೀಲ ಅವರ ಬೆನ್ನುಡಿ ಬರಹವಿದೆ; ಗೋನಾಳ ಅವರ 10ನೇ ಕೃತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಂಕು-ಡೊಂಕುಗಳನ್ನು ಅದಕ್ಕೆ ಪರಿಹಾರವನ್ನು ಸೂಚಿಸಿ ವ್ಯವಸ್ಥೆಯ ಕೈಗನ್ನಡಿಯನ್ನು ತಮ್ಮ "ಪ್ರಜಾ ರಕ್ಷಕರೇ ಭಕ್ಷಕರಾದರೇ?" ಎನ್ನುವ ಕೃತಿಯ ಮೂಲಕ ಈ ವ್ಯವಸ್ಥೆಯ ಕೈಗನ್ನಡಿಯನ್ನಾಗಿ ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಪ್ರಬಲವಾಗಿ ತಮ್ಮ ಜವಾಬ್ದಾರಿಯನ್ನರಿತು ಕೆಲಸ ಮಾಡಿದಾಗ ಮಾತ್ರ ಸುಭದ್ರ ಸರ್ಕಾರ ಹಾಗೂ ನೆಮ್ಮದಿಯ ಸಾಮಾಜಿಕ ವಾತಾವರಣ ಸಾಧ್ಯ ಎನ್ನುವ ಗೋನಾಳರ ಚಿಂತನೆ ಪ್ರಶ್ನೆ ಒಂದೇ, ಪ್ರಚಾರಕ್ಷಕರೇ ಭಕ್ಷಕರಾದರೇ ಪ್ರಜಾಪ್ರಭುತ್ವದ ಉಳಿವು ಹೇಗೆ ಎನ್ನುವುದು. ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ.
ಜಿ.ಎಸ್. ಗೋನಾಳ ಅವರು ಕ್ರಿಯಾಶೀಲ ಪತ್ರಕರ್ತ, ಸಮಾಜಮುಖಿ ಚಿಂತಕ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ತಾಲೂಕಿನ ಮಾದಿನೂರಿನ ಅಪ್ಪಟ ಗ್ರಾಮೀಣ ಕೃಷಿಕ ಮನೆತನದ ಹಿನ್ನೆಲೆಯವರು. ಧಾರವಾಡ, ಕೊಲ್ಲಾಪುರ ಮಹಾವಿದ್ಯಾಲಯಗಳಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಮೂಲಕ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರು. ಕೃತಿಗಳು: ಪ್ರಜಾ ರಕ್ಷಕರೇ ಭಕ್ಷಕರಾದರೇ..?, ಅಂತರಂಗದೊಳ್ ಚಿಗುರಲಿ ಶರಣರ ವಚನಾಮೃತಗಳು, ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ, ಸಂಸಾರದಲ್ಲಿ ಸಾಮರಸ್ಯ, ಸಮೃದ್ಧಿ ಜೀವನದಲ್ಲಿ ದಾರಿದೀಪಗಳು ...
READ MORE