‘ನನ್ನ ಅವ್ವ ನನ್ನ ಅಪ್ಪ’ ಕೃತಿಯು ಹೇಮಾ ಪಟ್ಟಣಶೆಟ್ಟಿ ಅವರ ಸಂಪಾದಿತ ಸಂಪುಟ -2 ‘ಸಂಕಲನ’ ದ್ವೈ ಮಾಸಿಕ ಪತ್ರಿಕೆಯಲ್ಲಿ ಪ್ರಕಟಿತ ಲೇಖನ ಸಂಕಲನವಾಗಿದೆ. ಕೃತಿಯು 22 ಪರಿವಿಡಿಗಳಾದ ನಮ್ಮಮ್ಮಪ್ಪ (ರಾಗಿಣಿ ಆರ್), ನನ್ನ ಅಪ್ಪ ನನ್ನ ಅಮ್ಮ (ಕೆ.ವಿ. ಉಭಯಭಾರತಿ), ನನ್ನ ಅವ್ವ ನನ್ನ ಅಪ್ಪ ( ಪಾಂಡುರಂಗ ಕೋಟಿ), ನನ್ನ ಅಪ್ಪ ನನ್ನ ಅವ್ವ ( ಶರಣಗೌಡ ಎರಡೆತ್ತಿನ), ನನ್ನ ತೀರ್ಥರೂಪರು (ಈರಪ್ಪ ಎಂ. ಕಂಬಳಿ), ನನ್ನ ಅಪ್ಪ ನನ್ನ ಅಮ್ಮ(ಮಿರ್ಜಾ ಬಷೀರ್), ಅಮ್ಮನ ಪ್ರಭಾವ (ಆರ್. ಮೋಹನ್ ಕುಮಾರ್), ನನ್ನ ಅಪ್ಪ ನನ್ನ ಅಮ್ಮ (ನಾ. ಡಿಸೋಜ), ನನ್ನ ಪಪ್ಪ ನನ್ನ ಅಮ್ಮ (ಮಿರ್ಜಾ ಬಷೀರ್), ಅಮ್ಮನ ಪ್ರಭಾವ(ಆರ್. ಮೋಹನ್ ಕುಮಾರ್)ನನ್ನ ಅಪ್ಪ ನನ್ನ ಅಮ್ಮ (ಕೆ. ಉಷಾ ಪಿ.ರೈ), ಪ್ರೀತಿಯ ಕೈಗಳೇ ಇಲ್ಲದ ಅಮ್ಮ (ಸ. ರಘುನಾಥ), ನನ್ನ ಅಪ್ಪ ನನ್ನ ಅಮ್ಮ(ರೇಖಾ ಬನ್ನಾಡಿ), ನನ್ನಪ್ಪ ನನ್ನವ್ವ (ಸುಮಿತ್ರಾ ಕುಂಬಾರ), ನನ್ನ ಅಪ್ಪ ನನ್ನ ಅಮ್ಮ (ಶ್ರೀನಿವಾಸ ವಿ. ಸುತ್ರಾವೆ), ನನ್ನ ನೆನಪಿನಂಗಳದಲ್ಲಿ ಅಪ್ಪ (ಗಿರಿಜಾ ಶಾಸ್ತ್ರಿ), ಅಪ್ಪ- ಅಮ್ಮ (ಎಸ್. ಆರ್. ಗುಂಜಾಳ), ಅಕ್ಕ-ಅಣ್ಣ ಅನ್ನೋ ಅವ್ವ ಅಪ್ಪ (ಯಶವಂತ ಸರದೇಶಪಾಂಡೆ), ನನ್ನ ಅವ್ವ-ಅಪ್ಪ (ಬಾಳಣ್ಣ ಸೀಗೀಹಳ್ಳಿ), ಹೇಗಿದ್ದ ನನ್ನಪ್ಪ ಹೇಗಾಗಿ ಹೋದ (ಶಶಿ ಸಾಲಿ), ಅವ್ವಯ್ಯ, ಅಪ್ಪಚ್ಚ (ಎಸ್.ಪಿ. ಪದ್ಮಪ್ರಸಾದ್) ಇವೆಲ್ಲವುಗಳನ್ನು ಒಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : 'ಸಂಕಲನ' ಪತ್ರಿಕೆಯಲ್ಲಿ ಪ್ರಕಟವಾದ 'ನನ್ನ ಅವ್ವ ನನ್ನ ಅಪ್ಪ' ಲೇಖನ ಮಾಲಿಕೆ ಕನ್ನಡದಲ್ಲಿ ಒಂದು ಹೊಸ ಅಧ್ಯಾಯವನ್ನೇ ಆರಂಭಿಸಿತು. ಈ ಪ್ರಕಾರದ ಲೇಖನಗಳು ಹೊಸ ಸಾಂಸ್ಕೃತಿಕ ದಾಖಲೆಗಳನ್ನು ನಿರ್ಮಿಸುವಲ್ಲಿ ಹಾಗೂ ಅಭಿವ್ಯಕ್ತಿಯ ಕಾವ್ಯಾತ್ಮಕ ಪ್ರಾಮಾಣಿಕತೆಯನ್ನು ಕೆದಕುವಲ್ಲಿ ಸಹಕಾರಿಯಾಗುತ್ತವೆ. ಸಂಸ್ಕೃತಿಯ ರಕ್ಷಣೆ, ಇತಿಹಾಸದ ನಿರೂಪಣೆ, ಸಾಹಿತ್ಯದ ರೂಪಣೆಯ ನಿರಂತರ ಬೆಳವಣಿಗೆಯ ಜೊತೆಗೆ ವ್ಯಕ್ತಿಯ ಭಾವಶುದ್ಧಿ, ಮನೋವಿರೇಚನ ಹಾಗೂ ರಚನಾತ್ಮಕ ದೃಷ್ಟಿಯತ್ತ ಒಲವು ತೋರುತ್ತವೆ. ಸಾಹಿತ್ಯ ಚರಿತ್ರೆಯಲ್ಲಿ ಹೊಸ ಹೆಜ್ಜೆ ಮೂಡಿಸುವ ಈ ಲೇಖನಗಳು ವ್ಯಾಪಕ, ವಿಶಿಷ್ಟ ಅನುಭವ ಹಾಗೂ ಭಾಷಾ ವೈವಿಧ್ಯದಿಂದಾಗಿ ಚಿತ್ರಶಾಲೆಯನ್ನೇ ನಮ್ಮ ಕಣ್ಣೆದುರು ನಿರ್ಮಿಸುತ್ತವೆ. ದಾಖಲೆಗೊಳ್ಳಲೇಬೇಕಾದ ಹಲವಾರು ಸಂಗತಿಗಳು, ಮಸುಕಾಗಿ ಕಳೆದುಹೋದ ಮರೆಯಬಾರದ ನೆನಪುಗಳು, ವಿಸ್ಕೃತಿಯಲ್ಲಿ ಹುದುಗಿ ಹೋಗುತ್ತಿರುವ ಜೀವನಮೌಲ್ಯ, ರೀತಿ-ನೀತಿ ಈ ಲೇಖನಗಳಲ್ಲಿ ಮೈದಳೆದು ಜೀವದುಂಬಿ ನಿಂತಿವೆ. ಬರವಣಿಗೆಯ ಧಾಟಿ ನಿರುದ್ವಿಗ್ನವಾಗಿದ್ದರೂ ಆದ್ರ್ರ ನಿರೂಪಣೆಯಿಂದ ಓದುಗರ ಅಂತರಾಳಕ್ಕೆ ಇಳಿಯುತ್ತವೆ. ಜೊತೆಗೆ ಪ್ರತಿಯೊಬ್ಬರ ಬಾಲ್ಯದ ಅದ್ಭುತ ರಮ್ಯಲೋಕದ ಪುನಃಪ್ರವೇಶಕ್ಕೆ ಇವು ದಾರಿಯಾಗುತ್ತವೆ. ಇಲ್ಲಿಯ ಎಲ್ಲ ಲೇಖನಗಳು ಅಪರೂಪದ ಬರವಣಿಗೆಗಳು, ಒಂದಕ್ಕಿಂತ ಒಂದು ಭಿನ್ನ, ವಿಶಿಷ್ಟ, ಕೆಲವೊಮ್ಮೆ ವಿಚಿತ್ರ, ಅದ್ಭುತ ಎನ್ನುವಂತೆ ಇವೆ. ಒಂದೊಂದು ಲೇಖನವೂ ಒಂದೊಂದು ಬೆಳಕಿನ ಲೋಕದ ಅಪೂರ್ವ ಚಿತ್ರ ಸಂಪುಟವಾಗಿವೆ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MORE