‘ಮರು ಚಿಂತನೆ’ ಲೇಖಕ ಡಾ. ಬಸವರಾಜ ಸಬರದ ಅವರ ಲೇಖನ ಸಂಕಲನ. ಈ ಕೃತಿಗೆ ಡಾ.ಜಿ. ರಾಮಕೃಷ್ಣ ಅವರ ಬೆನ್ನುಡಿ ಮಾತುಗಳಿವೆ. ಕೃತಿಯ ಕುರಿತು ಬರೆಯುತ್ತಾ ಎಂಭತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರು ಕವಿ-ನಾಟಕಕಾರ-ವಿಮರ್ಶಕ ಡಾ. ಬಸವರಾಜ ಸಬರದ ಅವರು ತಮ್ಮ ವೈಚಾರಿಕತೆಯ ಮತ್ತೊಂದು ಹೊಳೆಯನ್ನು ಪ್ರಸ್ತುತ ಸಂಕಲನದಲ್ಲಿ ಹರಿಸಿದ್ದಾರೆ ಎಂದಿದ್ದಾರೆ. ಜೊತೆಗೆ ಜಡ್ಡು ಹಿಡಿದ ಬೌದ್ಧಿಕತೆಗೆ ಅರ ಹಿಡಿಯುವುದು ಅವರ ಎಲ್ಲ ಕೃತಿಗಳಲ್ಲೂ ಕಂಡುಬರುತ್ತದೆ. ವಸ್ತುಗಳನ್ನು ನಯಗೊಳಿಸಲು ಹಾಗೂ ಆಯುಧಗಳನ್ನು ಹರಿತಗೊಳಿಸಲು ಅರ ಅತಿ ಪ್ರಯೋಜಕವಾದದ್ದು. ಶಿಷ್ಟರೆಂದು ಕರೆದುಕೊಳ್ಳುವವರ ಸೀಮಿತ ದೃಷ್ಟಿ, ಜೀವನವನ್ನು ಹ್ರಾಸಗೊಳಿಸುವ ಸಂಕುಚಿತ ಮನೋಭಾವ ಹಾಗೂ ಜನವಿರೋಧಿ ತಾತ್ತ್ವಿಕತೆ ಮತ್ತು ಮೌಲ್ಯಗಳಿಗೆ ಪರ್ಯಾಯವಾಗಿ ವಿಶಿಷ್ಟ ಸೂಕ್ಷ್ಮತೆ, ಜೀವನದ ಬಗೆಗಿನ ಆಳವಾದ ಗ್ರಹಿಕೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವುದು, ಪೋಷಿಸುವುದು, ವಿಚಾರಗಳನ್ನು ಹಸನುಗೊಳಿಸಲು ಹರಿತಗೊಳಿಸಲು ಇರುವ ವಿಧಾನ ಎಂದಿದ್ದಾರೆ. ಹಾಗೇ ಅದನ್ನಿಲ್ಲ ತೆರೆದ ಮನಸ್ಸಿನಿಂದ ಅನುಸರಿಸಲಾಗಿದೆ. ಅನಗತ್ಯವಾದ ದೀರ್ಘ ವಿಶ್ಲೇಷಣೆಯ ತೊಡಕಿನಲ್ಲಿ ಸಿಲುಕಿಕೊಳ್ಳದೇ ನೇರವಾಗಿ ವೈಚಾರಿಕ ಪ್ರಖರತೆಗೆ ಆದ್ಯತೆ ನೀಡಿರುವುದು ಇಲ್ಲಿ ಬರಹಗಳ ವೈಶಿಷ್ಟ್ಯ, ವಚನ ಸಾಹಿತ್ಯದ ಕೆಲವು ಭಾಗಗಳನ್ನು ಕುರಿತಂತೆ ಹೊಸಹೊಳಹುಗಳು ಆಗಾಗ್ಗೆ ಗೋಚರಿಸುವುದು ಇವರ ಬೇರೆ ಕೃತಿಗಳಲ್ಲೂ ಉಂಟು ಅದಿಲ್ಲಿ ಪುನರಾವಿಷ್ಕಾರವಾಗಿದೆ. ಸ್ವಾಗತಾರ್ಹವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE