ಡಾ. ಆನಂದ ಋಗ್ವೇದಿ ಅವರ ವಿಮರ್ಶಾತ್ಮಕ ಲೇಖನಗಳ ಸಂಗ್ರಹ ಕೃತಿ ಇದು. ಸಾಹಿತಿ ಪಿ.ಪೀರಬಾಷಾ ಅವರು ಬೆನ್ನುಡಿ ಬರೆದು ‘ತಾನು ಬದುಕಿನ ಕಾಲದೊಟ್ಟಿಗೆ ತೀವ್ರ ಅಸಮ್ಮತಿ ಇದ್ದು, ಮಾಡಬೇಕಾದುದೇನು ತೋಚದ ಕಾರಣಕ್ಕೆ ಹುಟ್ಟಿದ ತಳಮಳ. ಹಾಗೆಂದು ಇದು ಅಸಹಾಯಕತೆಯೂ ಅಲ್ಲ. ಬದಲಾಗಿ, ಹೊಸ ಶೋಧದ ತಹತಹವಿದು. ಗುರಿಯೆಡೆಗಿನ ಹಾದಿಯಲ್ಲದ್ದರಿಂದ ಗುರಿ-ದಾರಿಗಳೆರಡನ್ನೂ ಕಟ್ಟಿಕೊಳ್ಳಲು ಬೇಕಿರುವ ತಳಮಳದ ಹಾದಿ’ ಎಂದು ಲೇಖನಗಳ ಸ್ವರೂಪಗಳನ್ನು ಪ್ರಶಂಸಿಸಿದ್ದಾರೆ.
ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ- ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ. ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...
READ MORE