‘ಯುಗದರಿವು’ ಜಿ. ರಾಮಕೃಷ್ಣ ಅವರ ರಚನೆಯ ಲೇಖನವಾಗಿದೆ. ಕುವೆಂಪು ಅವರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಹೊರಬಂದ ಪುಸ್ತಕಗಳ ಒಂದು ನೂರು ಕೃತಿಗಳಲ್ಲಿ ಈ ಪುಸ್ತಕವೂ ಒಂದು. ಯಾವ ಮೂಢನಂಬಿಕೆಯ, ಮತಾಂಧತೆಯ ವಿರುದ್ದ ಕುವೆಂಪು ಸಮರ ಸಾರಿದ್ದರೋ ಆ ದಿಶೆಯಲ್ಲೇ ಇಲ್ಲಿನ ಲೇಖನಗಳೂ ಚಿಂತಿಸುತ್ತವೆ.
ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...
READ MOREಹೊಸತು - ಎಪ್ರಿಲ್ -2005
ಕುವೆಂಪು ಅವರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಹೊರಬಂದ ಪುಸ್ತಕಗಳ ಒಂದು ನೂರು ಕೃತಿಗಳಲ್ಲಿ ಈ ಪುಸ್ತಕವೂ ಒಂದು. ಯಾವ ಮೂಢನಂಬಿಕೆಯ, ಮತಾಂಧತೆಯ ವಿರುದ್ದ ಕುವೆಂಪು ಸಮರ ಸಾರಿದ್ದರೋ ಆ ದಿಶೆಯಲ್ಲೇ ಇಲ್ಲಿನ ಲೇಖನಗಳೂ ಚಿಂತಿಸುತ್ತವೆ. ಕ್ರಾಂತಿಕಾರಿ ಮನೋಭಾವನೆಯುಳ್ಳ ಒಂದು ಗುಣಾತ್ಮಕ ಬದಲಾವಣೆ ಬಯಸುವ ಎಲ್ಲರಿಗೂ ಇವು ತುಂಬ ರುಚಿಸುತ್ತವೆ. ಇಂದಿನ ಭಯೋತ್ಪಾದಕತೆ, ಧರ್ಮಾಂಧತೆಯ ಉಸಿರುಕಟ್ಟುವ ವಾತಾವರಣದಲ್ಲಿ ಅದಕ್ಕೆ ಕಾರಣವಾಗುವ ಕೆಲವು ಅಂಶಗಳನ್ನು ಸತ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತವೆ. ಚರಿತ್ರೆಯ ಜಗತ್ತಿನ ವಿದ್ಯಮಾನಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ನಮ್ಮ ನಡುವಿನ ಹಿರಿಯ ಚಿಂತಕರಾದ ಡಾ|| ಜಿ. ಆರ್. ಅವರ ಅರ್ಥಪೂರ್ಣ ಬರಹಗಳಿವು.