'ವಿವೇಚನೆ'ಯ ಸಂಕಲನದಲ್ಲಿ ಹನ್ನೊಂದು ಲೇಖನಗಳು ಚೆಲ್ಲಿಕೊಂಡಿವೆ. ಈ ಲೇಖನಗಳ ಮಹತ್ವವಿರುವುದು ಮುಖ್ಯವಾಗಿ ಸಾಹಿತ್ಯ, ಸಂಸ್ಕೃತಿ ಹಾಗೂ ಚರಿತ್ರೆಗಳನ್ನು ಗಂಭೀರವಾಗಿ ವಿವೇಚಿಸುವ ಪ್ರಯತ್ನ ಇಲ್ಲಿ ಅನಾವರಣಗೊಂಡಿದೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಾಲ್ಕು ಲೇಖನಗಳು ಕೊಂಡಿಯಾಗಿವೆ. ಇನ್ನು ನಾಲ್ಕು ಲೇಖನಗಳು ಸಂಸ್ಕೃತಿಗೆ ಕೊಂಡಿಯಾಗಿವೆ. ಉಳಿದ ಮೂರು ಲೇಖನಗಳು ಚರಿತ್ರೆಗೆ ಕೊಂಡಿಯಾಗಿವೆ. ಸಾಹಿತ್ಯ, ಸಂಸ್ಕೃತಿ, ಚರಿತ್ರೆ ಇವುಗಳು ಸಮಾಜದ ವಿಭಿನ್ನ ಆಯಾಮಗಳು. ಬದುಕಿನ ಅನಾವರಣವನ್ನು ಸಂಸ್ಕೃತಿ ಪ್ರತಿಬಿಂಬಿಸಿದರೆ, ಸಂಸ್ಕೃತಿಯ ಅನಾವರಣವನ್ನು ಬದುಕು ಪ್ರತಿಬಿಂಬಿಸುತ್ತದೆ. ಸಾಹಿತ್ಯ ಇದರ ಭಾಗವಾಗಿದ್ದರೂ ತನ್ನ ಸೃಜನಶೀಲತೆಯಲ್ಲಿ ಸಂಸ್ಕೃತಿಯ ಮೇಲೆ ಬೆಳಕು ಚಲ್ಲುತ್ತಲೇ ಸಮಾಜ-ಸಂಸ್ಕೃತಿ ದಿಕ್ಕು ತಪ್ಪಿದಾಗ ಅದನ್ನು ನಿಯಂತ್ರಿಸಿ ಇಂತಹ ಕತ್ತಲೆಯ ಮೇಲೆಯೂ ಬೆಳಕು ಚೆಲ್ಲಿ, ಸಂಸ್ಕೃತಿ, ಸಮಾಜ, ಚರಿತ್ರೆಗಳಾಚೆಗಿರುವ ಮಾನವೀಯ ಮೌಲ್ಯಗಳನ್ನು ಸೃಜನಶೀಲತೆಯ ನಡೆಯೊಳಗೆ ಕಟ್ಟಿಕೊಡುವ ಅದಮ್ಯ ಶಕ್ತಿಯನ್ನು ಅಂತರ್ಗತ ಮಾಡಿಕೊಂಡಿರುತ್ತದೆ ಎಂದು ಹೊನ್ನು ಸಿದ್ಧಾರ್ಥ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಲಲಿತ ಕೆ.ಪಿ ಮೂಲತಃ ಕೊಡಗಿನವರು. ಪ್ರಸ್ತುತ್ತ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಕೃತಿಗಳು: ವಿರಾಜಪೇಟೆ ತಾಲೂಕಿನ ಸ್ಥಳನಾಮಗಳು, ವಿವಕ್ಷಾ,ಜೀವಂತ ಪಳೆಯುಳಿಕೆಗಳ ಕುರಿತು, ವಿವೇಚನೆ,ಶೋಧನೆಯ ಹಾದಿಯಲ್ಲಿ, ಪೊಮ್ಮೋದಿರ ಪೊನ್ನಪ್ಪ, ಕೊಡಗಿನ ಜನಪದ ಕಥೆಗಳು, ಕೊಡಗಿನ ಭಾಷೆ ಮತ್ತು ಸಂಸ್ಕೃತಿ ...
READ MORE