ನಿವೃತ್ತ ಪತ್ರಕರ್ತ ಪಿ.ಶ್ರೀಧರ್ ನಾಯಕ್ ಅವರು ತಮ್ಮ ವೃತ್ತಿ ಜೀವನದ ಕೆಲವು ಅನುಭವಗಳನ್ನು ಒಗ್ಗೂಡಿಸಿ ಬರೆದ ಪುಸ್ತಕವೇ “ಹೇಳದೆ ಇದ್ದ ವಾಸ್ತವಗಳು”. ಶ್ರೀಧರ್ ನಾಯಕ್ ನಮ್ಮ ರಾಜಕೀಯ,ಸಾಮಾಜಿಕ,ಸಾಂಸ್ಕೃತಿಕ ಕ್ಷೇತ್ರಗಳನ್ನು ತೀರ ನಿಕಟವಾಗಿ ಗಮನಿಸಿ, ಮುಖ್ಯ ಬೆಳವಣಿಗೆಗಳನ್ನು ಶೋಧಿಸಿ ರಚಿಸಿರುವ ಈ ಕೃತಿ ಒಂದು ರೀತಿಯಲ್ಲಿ ಅವರ ಆತ್ಮ ಚರಿತ್ರೆಯ ಆಯ್ದ ಭಾಗವಿದ್ದಂತೆ. “ಪತ್ರಕರ್ತನಿಗೆ ಎಲ್ಲವನ್ನು ಸುದ್ದಿಯಲ್ಲಿ ಅಡಕಗೊಳಿಸಲು ಸಾಧ್ಯವಿಲ್ಲ. ಹೇಳದ ಇದ್ದ ವಿಷಯಗಳು ಹತ್ತು ಹಲವು ಇರುತ್ತವೆ.ಅವುಗಳನ್ನು ಈ ಪುಸ್ತಕದ ಮೂಲಕ ಓದುಗರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಪತ್ರಕರ್ತರು, ಹವ್ಯಾಸಿ ಓದುಗರು ಓದಬಹುದಾದ ಪುಸ್ತಕ ಇದಾಗಿದೆ.
ಪತ್ರಕರ್ತ, ಲೇಖಕ ಶ್ರೀಧರ್ ನಾಯಕ್ ಅವರು 1956 ಜೂನ್ 23ರಂದು ಉಡುಪಿಯಲ್ಲಿ ಜನಿಸಿದರು. ಕಲ್ಬುರ್ಗಿ ಮತ್ತು ಹಾಸನದಲ್ಲಿ ಒಟ್ಟು ಹತ್ತು ವರ್ಷಗಳ ಕಾಲ ಜಿಲ್ಲಾ ವರದಿಗಾರರಾಗಿ ತಮ್ಮ ವಿಶೇಷ ವರದಿಗಳಿಂದ ಗಮನ ಸೆಳೆದವರು. 'ಪ್ರಜಾವಾಣಿ'ಯ ಸಂಪಾದಕೀಯ ವಿಭಾಗದಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ‘ನಿಗೂಢತೆಯ ಬೆನ್ನನೇರಿ ಹೊರಟಾಗ’ (ಕಿರುಕಾದಂಬರಿ), ‘ಸ್ಪಂದನ’ (ಲೇಖನಗಳ ಸಂಗ್ರಹ), ‘ಪತ್ರಿಕೋದ್ಯಮ : ಒಂದು ನೇರ ನೋಟ’ ...
READ MORE