ಗೆಲುವಿನ ದುಃಖ ಸೋಲಿನ ಸುಖ

Author : ಉದಯ ಕುಮಾರ ಇರ್ವತ್ತೂರು

₹ 250.00




Published by: ಆಕೃತಿ ಆಶಯ ಪಬ್ಲಿಕೇಶನ್ಸ್
Address: ಮಂಗಳೂರು- 575001

Synopsys

ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರ ಕೃತಿ ʼಗೆಲುವಿನ ದುಃಖ ಮತ್ತು ಸೋಲಿನ ಸುಖʼ. ಇದು ಲೇಖಕರ ಶೈಕ್ಷಣಿಕ ಅನುಭವಗಳ ಕೃತಿಯಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ಸ್ವತಃ ಲೇಖಕರು, “ನಮಗಿರುವ ತಿಳಿವಿನ ಮಿತಿಯಿಂದಾಗಿ ಇಡೀ ಪರಿಸ್ಥಿತಿಯ ಒಂದು ಅಂಶವನ್ನು ಮಾತ್ರ ಗ್ರಹಿಸುವ ನಾವು ವಾಸ್ತವದಿಂದ ಬಹಳ ದೂರ ಉಳಿದು ನೆರಳಿನೊಂದಿಗೆ ಗುದ್ದಾಡುತ್ತಾ ಎಲ್ಲೋ ಕಳೆದು ಹೋಗುತ್ತೇವೆ. ಇಂತಹ ಬಹುತೇಕ ಸಂದರ್ಭಗಳಲ್ಲಿ ವೈಯಕ್ತಿಕವಾಗಿ ನಮಗಾಗುವ ಲಾಭ ನಷ್ಟಗಳ ಕುರಿತ ಆಲೋಚನೆಗಳ ಆಚೆಗೆ, ನಮ್ಮ ಕಣ್ಣೆದುರಿಗೆ ಇರುವ ಪರಿಸ್ಥಿತಿಯನ್ನು ಸೃಷ್ಟಿ ಮಾಡುವ ಒಂದು ವ್ಯವಸ್ಥೆ ಅಥವಾ ವಿನ್ಯಾಸವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ನಮ್ಮ ಅನುಭವಕ್ಕೆ ಬರುವ ಲಾಭ, ನಷ್ಟಗಳನ್ನು ಸೃಷ್ಟಿಸುವ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ವಿನ್ಯಾಸದ ಕುರಿತು ನಮಗೆ ಸರಿಯಾದ ತಿಳುವಳಿಕೆ ಇದ್ದಾಗ ಸಮಸ್ಯೆಯ ಮೂಲ ಎಲ್ಲಿದೆ ಮತ್ತು ಅದಕ್ಕೊಂದು ಪರಿಹಾರವನ್ನು ಎಲ್ಲಿ ಹೇಗೆ ಹುಡುಕಬೇಕೆನ್ನುವುದು ಅರ್ಥವಾಗಬಹುದಾಗಿದೆ. ಇದೊಂದು ಬಹಳ ಸಂಕೀರ್ಣವಾದ ವಿಚಾರ. ನಮ್ಮಂತಹ ಕೆಲವರು ವ್ಯವಸ್ಥೆಯಲ್ಲಿರುವ ಗೊಂದಲಗಳ ಮಧ್ಯೆಯೇ ಸಮಾನ ಮನಸ್ಕರ ಸಹಕಾರ ಪಡೆದು ಇದ್ದಬದ್ದ ಸವಲತ್ತುಗಳನ್ನು ದುಡಿಸಿಕೊಂಡು, ಜನರನ್ನು, ಸಂಸ್ಥೆಗಳನ್ನು ಮುನ್ನಡೆಸಲು ಸಣ್ಣ ಪ್ರಯತ್ನ ಮಾಡಿದ್ದೇವೆ. ಇಂತಹ ಪ್ರಯತ್ನಗಳ ಅನುಭವ ಬದುಕಿನ ದಾರಿ ಸವೆಸಲು, ಗೊಂದಲ ನಿವಾರಿಸಲು ಸಹಕಾರಿಯಾಗಿದೆ. ಕೆಲವೊಮ್ಮೆ ನಮ್ಮಲ್ಲಿರುವ ಅನುಭವ ಆಲೋಚನೆಗಳು ಮಿಕ್ಕುಳಿದವರಿಗೂ ತಲುಪಿದರೆ ಉಪಯುಕ್ತವಾಗಬಹುದೇನೋ ಅನಿಸುತ್ತದೆ. ನನ್ನ ಯೋಚನೆ, ಮಾತು ನಿಮ್ಮ ಮೌನವನ್ನು ಮುರಿದು ಕತೆಗಳಾಗಿ, ಪ್ರತಿ ಮಾತುಗಳಾಗಿ ಬದಲಾಯಿಸಿ ಸಂವಾದ, ಸಂಚಲನೆಗೆ ಮುನ್ನುಡಿಯಾಗಬಹುದು” ಎಂದು ಹೇಳಿದ್ದಾರೆ.

About the Author

ಉದಯ ಕುಮಾರ ಇರ್ವತ್ತೂರು
(01 June 1960)

ಡಾ. ಉದಯ ಕುಮಾರ್‌ ಇರ್ವತ್ತೂರು ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರು. ತಂದೆ ನೇಮಿರಾಜ್‌ ಹಾಗೂ ತಾಯಿ ಮಾಲತಿ. ಮಂಗಳೂರಿನ ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಬರವಣಿಗೆ ಇವರ ನೆಚ್ಚಿನ ಹವ್ಯಾಸ. ಈವರೆಗೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳು; ವಾಣಿಜ್ಯ ಶಾಸ್ತ್ರ,- ಕನ್ನಡ ವಿಶ್ವವಿದ್ಯಾಲಯ ಹಂಪಿ, ಅಭಿವೃದ್ಧಿ: ವಾಸ್ತವ ಮತ್ತು ವಿಕಲ್ಪ, ಉಡುಪಿ ಜಿಲ್ಲೆ, ಸರ್ವೋದಯ ಮತ್ತು ಅಭಿವೃದ್ದಿ, ಗೆಲುವಿನ ದುಃಖ ಮತ್ತು ಸೋಲಿನ ಸುಃಖ ಇತ್ಯಾದಿ. ...

READ MORE

Related Books