‘ಪ್ರತ್ಯೇಕ ಬುದ್ಧ ಅಲ್ಲಮ ಪ್ರಭು’ ಎಸ್. ನಟರಾಜ ಬೂದಾಳು ಅವರ ಲೇಖನ ಸಂಕಲನ. ಪರಂಜ್ಯೋತಿ ಪ್ರಜ್ಞೆಯಾದ ಅಲ್ಲಮಪ್ರಭುವನ್ನು ಕುರಿತು ಮಾಡಿದ ಧ್ಯಾನ. ಅವರವರ ಅಲ್ಲಮ ಗುರುವನ್ನು ಕಾಣಲು ನೆರವಾಗುವ ಕೈಮರ.
ಹಿಂದು ಮುಂದಿನ ಹಂಗನ್ನು ಹರಿದುಕೊಂಡ ಸಹಜ ಯಾನಿಗಳನ್ನು ಪ್ರತ್ಯೇಕ ಬುದ್ದರೆನ್ನುತ್ತಾರೆ. ವಚನಕಾರರಿಗೆ ಶೂನ್ಯಪೀಠದ ಗುರುವಾಗಿ, ನಾಥಪಂಥದವರಿಗೆ ಅಲ್ಲಮನಾಥನಾಗಿ, ಸೂಫಿಗಳಿಗೆ ಆಲಂಪ್ರಭುವಾಗಿ, ತತ್ವಪದಕಾರರಿಗೆ ಶಿವಸ್ವರೂಪಿಯಾಗಿ, ಜನಪದರಿಗೆ ಮಂಟೇಸ್ವಾಮಿ, ಮಲೆಮಾದೇಶ್ವರರಾಗಿ, ಅವನು ಎಲ್ಲರನ್ನೂ ಮುನ್ನಡೆಸುವ ಕಾರುಣ್ಯಮೂರ್ತಿಯಾಗಿದ್ದಾನೆ.
ಬಸವಾದಿ ಶರಣರು ಕಲ್ಯಾಣದ ಬಾಗಿಲ ಅಕ್ಕ ಮುಕ್ತಾಯಕ್ಕರು ತಮ್ಮ ಪ್ರಯಾಣದ ದಾರಿಯಲ್ಲಿ, ಶೂನ್ಯಸಂಪಾದನಾಕಾರರು ತತ್ವಪದಕಾರರು ಏಕತಾರಿಯ ನಾದದಲ್ಲಿ, ನೀಲಗಾರರು ಗಗ್ಗರಗಳಲ್ಲಿ, ಸಂಕಟದ ಸಮೂಹಗಳು ಸೂಫಿ ಗದ್ದುಗೆಗಳಲ್ಲಿ ಅಲ್ಲಮಗುರುವನ್ನು ಇಂದಿಗೂ ಇದಿರಾಗುತ್ತಾರೆ.
’ಎಚ್ಚರಿರಬೇಕೋ ಪ್ರಭುಲಿಂಗಲೀಲಾ ಓದುವವಗೆಚ್ಚರಿರಬೇಕ” ಎಂದು ಶರೀಫ, ಅಲ್ಲಮಗುರುವಿನ ಅನುಸಂಧಾನಿಯನ್ನು ಎಚ್ಚರಿಸುತ್ತಾನೆ. ಅಜ್ಞಾನದ ಕೌದಿಯೊಂದು ಸಮೂಹದ ಮೇಲೆ ಕವುಚಿಕೊಳ್ಳಲು ಹಾತೊರೆಯುತ್ತಲೇ ಇರುವ ಈ ಹೊತ್ತಿನಲ್ಲಿ, ಅದನ್ನು ದಾಟಬಲ್ಲ ಅಂಗೈಯೊಳಗಿನ ಜ್ಯೋತಿ ಮುಂಗೈಯೊಳಗಿನ ಜ್ಯೋತಿ, ಹಾದಿಬೀದಿಯೊಳಗಿನ ಜ್ಯೋತಿಯಾಗಿ ಬೆಳಗುತ್ತಿರುವವನು ಅಲ್ಲಮಗುರು.
ಹನ್ನೆರಡನೆಯ ಶತಮಾನದಿಂದ ಇಂದಿನವರೆಗೆ ಕನ್ನಡ ಭಾಷಿಕ ಸಂಸ್ಕೃತಿ ಮತ್ತೆಮತ್ತೆ ಮುಖಾಮುಖಿಯಾಗಬಯಸುವ ದಾರ್ಶನಿಕ ಪ್ರತಿಭೆ ಅಲ್ಲಮಪ್ರಭು, ಅವನು ಕನ್ನಡದ ಬಯಲು ಮತ್ತು ಎಲ್ಲರಲ್ಲಿಯೂ ಅದರ ಸಾಧ್ಯತೆಯನ್ನು ಕಂಡ ಮಹಾಯಾನಿ. ಅಂಥಾ ಅಲ್ಲಮ ಪ್ರಭುವಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕೃತಿ ಪ್ರಕಟಿಸಲಾಗಿದೆ.
ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...
READ MORE