ಭಾರತದ ಧೀರ ಚೇತನಗಳು

Author : ಎಲ್. ವಿ. ಶಾಂತಕುಮಾರಿ

Pages 306

₹ 405.00




Year of Publication: 2024
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‍ ರಸ್ತೆ, ನ್ಯು ಹುಬ್ಬಳ್ಳಿ, ಹುಬ್ಬಳ್ಳಿ-580020.
Phone: 094481 10034

Synopsys

‘ಭಾರತದ ಧೀರ ಚೇತನಗಳು’ ಎಲ್.ವಿ.ಶಾಂತಕುಮಾರಿ ಅವರ ಕೃತಿಯಾಗಿದೆ. ಇದಕ್ಕೆ ಎಸ್.ಎಲ್.ಭೈರಪ್ಪ ಅವರ ಬೆನ್ನುಡಿ ಬರಹವಿದೆ; ವಿಕ್ರಮ್ ಸಂಪತ್ ಅವರು ಬರೆಯುವ ಇತಿಹಾಸಕ್ಕೆ ಸಂಬಂಧಿಸಿದ ಯಾವುದೇ ಲೇಖನಗಳಾದರೂ ತುಂಬ ಯೋಗ್ಯತೆಯುಳ್ಳದ್ದೂ ನಂಬಿಕೆಗೆ ಅರ್ಹವಾದುದೂ ಆಗಿರುತ್ತವೆ. ಅವರು ತುಂಬ ಆಳವಾಗಿಯೂ ವ್ಯಾಪಕವಾಗಿಯೂ ಅಧ್ಯಯನ ಮಾಡದೇ ತಿಳಿದುಕೊಳ್ಳದೇ ಏನನ್ನೂ ಬರೆಯುವುದಿಲ್ಲ. ಅವರ ಅಧ್ಯಯನ ಮತ್ತು ಅಧ್ಯಯನ ಸಾಮಗ್ರಿಗಳ ಸಂಗ್ರಹಗಳೇ ತುಂಬ ಪರಿಶ್ರಮದಾಯಕವಾದುದು. ಇತಿಹಾಸಕ್ಕೆ ಸಂಬಂಧಪಟ್ಟ ಸಂಗತಿಯನ್ನೋ ವ್ಯಕ್ತಿಯನ್ನೋ ಕುರಿತು ಅವರು ಸಾಕಷ್ಟು ಆಧಾರಗಳಿಲ್ಲದೇ ಬರೆಯುವುದಿಲ್ಲ. ಸತ್ಯವೇ ಅವರ ಬರಹದ ಜೀವಾಳ. ಶೈಲಿಯೂ ಅಷ್ಟೇ ಮೊನಚಾಗಿರುತ್ತದೆ. ಇತಿಹಾಸವಾದರೂ ಕತೆ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಾನಂತರದ ರಾಜಕಾರಣದ ದುರುದ್ದೇಶಗಳಿಂದಾಗಿ, ದೇಶಕ್ಕೆ ದಾಳಿಯಿಟ್ಟು, ಕ್ರೌರ್ಯ-ಲೂಟಿ-ಮತಾಂತರಗಳೇ ಅವರ ಆಡಳಿತದ ನೀತಿಯನ್ನಾಗಿಸಿಕೊಂಡು ನಮ್ಮ ಸನಾತನ ದೇಶದ ಸಂಸ್ಕೃತಿಯನ್ನು ಹಾಳುಮಾಡಿದವರನ್ನೇ ವೈಭವೀಕರಿಸಲಾಯಿತು. ದೇಶಕ್ಕಾಗಿ ಸಮಾಜಕ್ಕಾಗಿ ಆತ್ಮಗೌರವಕ್ಕಾಗಿ ಅಂತಹ ದಾಳಿಕೋರರೊಂದಿಗೆ ಹೋರಾಡಿದ ನಮ್ಮ ವೀರರನ್ನು ನಮ್ಮ ಮಕ್ಕಳಿಂದಲೂ ಓದುಗರಿಂದಲೂ ದೂರವೇ ಇರಿಸಲಾಯಿತು. ವಿಕ್ರಮ್ ಸಂಪತ್ ಮತ್ತು ಇಂತಹ ಹೊಸ ತಲೆಮಾರಿನ ಸ್ವತಂತ್ರ ಮನೋಭಾವದ ಅಧ್ಯಯನಶೀಲರ ಬರಹಗಳಿಂದಾಗಿ ವಿಸ್ಕೃತಿಗೊಳಗಾಗಿದ್ದ ಅಂತಹ ವೀರರೂ ಸತ್ಯಸಂಗತಿಗಳೂ ನಮ್ಮ ತಿಳಿವಳಿಕೆಗೆ ಎಟುಕುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.

About the Author

ಎಲ್. ವಿ. ಶಾಂತಕುಮಾರಿ

ಶಾಂತಕುಮಾರಿ ಎಲ್.ವಿ., ಎಂ.ಎ.(ಇಂಗ್ಲಿಷ್) ಹಿಂದಿ(ವಿಶಾರದ) ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಮೈಸೂರಿನಲ್ಲಿ 10-03-1938 ರಂದು ಜನಿಸಿದರು. ತಂದೆ ಲಕ್ಕೇನಹಳ್ಳಿ ವೆಂಕಟರಾಮಯ್ಯ, ತಾಯಿ- ಲಲಿತಮ್ಮ. ಎಚ್.ವಿ. ಸಾವಿತ್ರಮ್ಮ-2006, ಅನುಪಮಾ ನಿರಂಜನ -2016,, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ರಲ್ಲಿ ಇವರ ಪ್ರಕಟಿತ ಕೃತಿಗಳು. ನೆನಪು ಗರಿ ಬಿಚ್ಚಿದಾಗ, ಚೈತನ್ಯದ ಚಿಲುಮೆ-ಜೀವನ ಚಿತ್ರಗಳು. ಪಪೆ ಮತ್ತು ಇತರ ಕತೆಗಳನ್ನು ಭಾಷಾಂತರಿಸಿದ್ದಾರೆ. ಯುಗಸಾಕ್ಷಿ-2009 ರಲ್ಲಿ ವಿಮರ್ಶಾ ಕೃತಿ ಪ್ರಕಟವಾಗಿದೆ.  ...

READ MORE

Related Books