ಲೇಖಕ ಎಚ್.ಆರ್.ವಿಶ್ವಾಸ ಅವರ ಲೇಖನಗಳ ಸಂಗ್ರಹ ಸ್ಮೃತಿಪಥ. ಈ ಕೃತಿಗೆ ಮುರಳೀಧರ ಉಪಾಧ್ಯ ಹಿರಿಯಡಕ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ‘ಸ್ಮೃತಿಪಥ’ ಪುಸ್ತಕದ ಬರವಣಿಗೆಯ ಹಿನ್ನಲೆಯನ್ನು ವಿಶ್ವಸ ಅವರು ಹೀಗೆ ವಿವರಿಸುತ್ತಾರೆ-’ಎಂಟು ತಿಂಗಳ ಹಿಂದೆ (19-07-2013) ನಡೆದ ರಸ್ತೆ ಅಪಘಾತವೊಂದರಲ್ಲಿ ತೀವ್ರ ಜರ್ಜರಿತನಾಗಿ ಪವಾಡವೆನ್ನುವ ರಿತಿಯಲ್ಲಿ ಬದುಕಿಬಂದು, ವಿಶ್ರಾಂತಿಗೆಂದು ನಾಲ್ಕಾರು ತಿಂಗಳು ಮನೆಯಲ್ಲೆ ಅಲ್ಲಡದೆ ಪಟ್ಟಾಗಿ ಕುಳಿತಿದ್ದಾಗಬಿಡದೆ ಕಾಡಲು ತೊಡಗಿದವು ಹಳೆಯ ನೆನಪುಗಳು. ಅವುಗಳಿಗೆ ಅಕ್ಷರ ರೂಪು ಕೊಡಲು ಪ್ರಯತ್ನಿಸಿದೆ. ಅದರ ಫಲವೇ ಈ ಸ್ಮೃತಿಗಳು’ ಕೃತಿಯ ಅನುಕ್ರಮಣಿಕೆಯಲ್ಲಿ ಮಲೆನಾಡ ಮಡಿಲಲ್ಲಿ, ಅಕ್ಷರ ಕಲಿಕೆಯ ಸಕ್ಕರೆ ಸಮೃತಿಗಳು, ವಿದ್ಯಾಮಭ್ಯಸನೇನೇವ…., ಅಭಿನಯದ ನಂಟು, ಪುಸ್ತಕಗಳ ಲೋಕದಲ್ಲಿ, ಅನುಭವದ ಬೆನ್ನೆರಿ, ವಿದ್ವಾಂಸರ ವಿಶ್ವದಲ್ಲಿ, ಮಠಾಧೀಶರ ಸಾನ್ನಿಧ್ಯದಲ್ಲಿ, ಸಾಹಿತಿಗಳ ಸಂಗದಲ್ಲಿ, ಆಂದೋಲನದ ನೆನಪುಗಳು ಎಂಬ ಶೀರ್ಷಿಕೆಗಳಿವೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE