‘ಅಂತರ್ಯಾನ’ ಲೇಖಕ ಎನ್. ಶ್ರೀನಿವಾಸ ಉಡುಪ ಅವರ ಕೃತಿ. ಅನೇಕ ಪಠ್ಯಗಳನ್ನು ಸಂಯೋಜಿಸುವ ವಿಧಾನ ಮತ್ತು ಒಂದು ಆಧುನಿಕವಾದ ಪಠ್ಯವನ್ನು ಪ್ರಸ್ತಾಪಿಸುತ್ತಾ ಅದೇ ಸಮಯದಲ್ಲಿ ಇದ್ದಕಿದ್ದಂತೆ ಮತ್ತೊಂದು ಹಳೆಯ ಪಠ್ಯಕ್ಕೂ ಲೇಖಕರು ಹೋಗಬಲ್ಲರು, ಜಾನಪದ ಪಠ್ಯಕ್ಕೂ ಹೋಗಬಲ್ಲರು, ಅಥವಾ ಮನಃಶಾಸ್ತ್ರದ ಪುಸ್ತಕವೊಂದಕ್ಕೂ ಹೋಗಬಲ್ಲರು. ಈ ವಿವಿಧ ಮೂಲಗಳ, ವಿವಿಧ ವರ್ಣಗಳ ಪಠ್ಯಗಳ ಸಂಯೋಜನೆ ಈ ಬರವಣಿಗೆಯ ಶೈಲಿಯನ್ನು ಈ ಕೃತಿಯಲ್ಲಿ ಗಮನಿಸಬಹುದು. ಆಧುನಿಕ, ಪ್ರಾಚೀನ, ಪೌರ್ವಾತ್ಯ ಅಭಿಜಾತ, ಜಾನಪದ ಮುಂತಾದ ವಿವಿಧ ನೆಲೆಗಳ ಪಠ್ಯಗಳನ್ನು ಅವರು ಬಳಸಿಕೊಳ್ಳುವಾಗಲೂ ಅಲ್ಲಿ ಎಂದೂ ಯಾವ ಬಗೆಯ ಶ್ರೇಣೀಕರಣವನ್ನು ಸೂಚಿಸುವುದಿಲ್ಲ ಹಾಗೂ ಓದುಗನಲ್ಲೂ ಈ ಎಲ್ಲ ನೆಲೆಗಳ ಬಗೆಗೂ ಸಮಾನವಾದ ಗೌರವನ್ನು ಸ್ಫುರಿಸುವಂತೆ ಕೃತಿಯನ್ನು ರಚಿಸುತ್ತಾರೆ. ಅವರ ವಿಭಿನ್ನ ಬರವಣಿಗೆಗೆ ಅಂತರ್ಯಾನ ಕೃತಿ ಒಂದು ಉದಾಹರಣೆ.
ತಮ್ಮ ಅನನ್ಯ ಮಕ್ಕಳ ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸನ್ನು ಗೆದ್ದವರು ಎನ್. ಶ್ರೀನಿವಾಸ ಉಡುಪ. ಅವರು 1935 ಆಗಸ್ಟ್ 15ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಎನ್. ವೆಂಕಟೇಶ ಉಡುಪ, ತಾಯಿ ಮಹಾಲಕ್ಷ್ಮಿ. ತಮ್ಮ ವಿದ್ಯಾಭ್ಯಾಸದ ನಂತರ ತುಂಗಾ ಕಾಲೇಜಿನಲ್ಲಿ ದೀರ್ಘ ಕಾಲ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತೀರ್ಥಹಳ್ಳಿಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ‘ಪಾಪು ಪದ್ಯಗಳು, ಕನ್ನಡ ನಾಡಿನ ಕೂಸುಮರಿ, ಕುಂಭಕರ್ಣನ ನಿದ್ದೆ’ ಅವರ ಮಕ್ಕಳ ಕವನ ಸಂಕಲನಗಳಾಗಿದ್ದು ‘ಹಿಡಿಂಬನ ತೋಟ, ಬೆರಳುಗಳು’ ಹೀಗೆ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ‘ಗೂಬಜ್ಜಿಯ ...
READ MORE