ಲೇಖಕ ನಾರಾಯಣ ಶೇವಿರೆ ಅವರ ಲೇಖನ ಕೃತಿ ʻಆಕೂತʼ. ಇಲ್ಲಿರುವ ಬರಹಗಳು ನಮ್ಮನ್ನು ಯೋಚನೆಗೆ ಹಚ್ಚುತ್ತವೆ. ಭಾಷಾಗೊಂದಲದಂಥ ದಿನನಿತ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದರ ಪದರಗಳನ್ನು ಬಿಚ್ಚಿ ವಾಸ್ತವವನ್ನು ತೋರಿಸುತ್ತವೆ. ನಾವು ಯೋಚಿಸಬೇಕಾದ ನಿಜಸಮಸ್ಯೆ ಏನು ಎಂಬುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಹಳ್ಳಿ-ನಗರಗಳ ಸಂಬಂಧ, ಆಹಾರದ ಮಹತ್ವ, ಭಾಷಾಸಾಮರಸ್ಯ, ವ್ಯಕ್ತಿತ್ವವರ್ಧನೆ, ಧರ್ಮ ತಂದೊಡ್ಡುವ ಸಮಸ್ಯೆಗಳ ಗಂಭೀರತೆ, ಕೃಷಿ, ಸಂಪ್ರದಾಯ – ಹೀಗೆ ಹಲವು ವಿಷಯಗಳನ್ನು ಮುಟ್ಟಿ ತಟ್ಟುವ, ಹಲವು ಪಟ್ಟು ಹಿಗ್ಗಿಸಿ ಸ್ಪಷ್ಟಗೊಳಿಸುವ, ಅವುಗಳೊಳಗಿನ ಸೂಕ್ಷ್ಮಗಳನ್ನು ಕಾಣಿಸುವ ಬರಹಗಳು ಇಲ್ಲಿವೆ.
ಲೇಖಕ ನಾರಾಯಣ ಶೇವಿರೆ ಮೂಲತಃ ಮಂಗಳೂರಿನವರು. ಪ್ರಸ್ತುತ, ಹರಿಹರಪುರದಲ್ಲಿ ವಾಸವಾಗಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿ ಕ್ಷೇತ್ರ. ಕೃತಿಗಳು :ಅವಿಖ್ಯಾತ ಸ್ವರಾಜ್ಯ ಕಲಿಗಳು. ...
READ MORE