‘ವೈಚಾರಿಕ ಲೇಖನಗಳು’ ಉದಯಕುಮಾರ್ ಹಬ್ಬು ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ನಮ್ಮ ಪ್ರಾಚೀನ ಭಾರತದಲ್ಲಿ ವೇದ ಉಪನಿಷತ್ತುಗಳು ಅರಣ್ಯಕಗಳು, ಪುರಾಣಗಳು, ಭಾಗವತ, ಮಹಾಭಾರತ ಮತ್ತು ರಾಮಾಯಣಗಳ ಸೃಷ್ಟಿಯಾಯಿತು. ಋಗ್ವೇದದಲ್ಲಿನ ಹತ್ತನೆಯ ಮಂಡಲದಲ್ಲಿ ನಾಸದೀಯ ಸೂಕ್ತ ಎಂಬ ಋಕ್ಕು ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ವಾಸ್ತವ ಚಿತ್ರಣ ಕೊಟ್ಟಿತು. ಇಂತಹ ಉನ್ನತ ಅಧ್ಯಾತ್ಮಿಕ ವಿಚಾರಗಳ ನಡುವೆಯೂ ಕೆಲವು ಮೌಢ್ಯಗಳು ನಂತರ ಮೂಡಿದ ಕಟ್ಟುನಿಟ್ಟಿನ ವರ್ಣಶ್ರಮ ವ್ಯವಸ್ಥೆಯೂ ಜನಸಾಮಾನ್ಯರ ಬದುಕನ್ನು ಹಾದಿ ತಪ್ಪಿಸಿ ನರಕಮಯವನ್ನಾಗಿ ಮಾಡಿತು ಇಂತಹ ಅಪಸವ್ಯಗಳು ಮಾನವ ವಿರೋಧಿಯಾಗಿದ್ದವು. ಜಾತಿ ತಾರತಮ್ಯ, ಮೇಲು- ಕೀಳು, ಸ್ಪಶ್ಯ ಅಸ್ತಶ್ಯಮುಂತಾದ ಕ್ರೂರ ನಡೆಗಳು ನಮ್ಮ ದೇಶದ ಕೆಳಸ್ತರದ ಮನುಷ್ಯರು ಪ್ರಾಣಿಗಿಂತ ದೈನ್ಯಾವಸ್ಥೆಯಲ್ಲಿ ನರಕದ ಬದುಕನ್ನು ಬದುಕುತ್ತಿದ್ದರು. ಪ್ರಾಚೀನ ಭಾರತದ ಧಾರ್ಮಿಕ ಕುರುಡುತನವನ್ನು ಮನಗಂಡು ಕಪಿಲ ಮುನಿ ಸಾಂಖ್ಯವನ್ನೂ, ಬುದ್ಧನು ಬೌದ್ಧಧರ್ಮವನ್ನೂ ಸ್ಥಾಪಿಸಿ ಬಡವರ್ಗದವರ ಸಾಮಾಜಿಕ ಆರ್ಥಿಕ ಸ್ಥಾನಮಾನಗಳನ್ನು ಉನ್ನತೀಕರಿಸಲು ಕಾರಣರಾದರು. ಈ ಎಲ್ಲ ವಿಚಾರಗಳ ಚಿಂತನ ಮಂಥನ ಈ ಪುಸ್ತಕದಲ್ಲಿದೆ. ದೇವರು, ಭಕ್ತಿ, ಪೂಜೆ ಆಚರಣೆಯ ಹೆಸರಿನಲ್ಲಿ ಜನಸಾಮಾನ್ಯರನ್ನು ಮೌಡ್ಯದಲ್ಲಿ ಮುಳುಗಿಸಿ ಮೇಲ್ವರ್ಗದವರು ಸುಖೀ ಜೀವನ ಮಾಡುತ್ತಿದ್ದು ಸಂವೇದನಾರಹಿತರಾಗಿದ್ದುದು ನಿಜಕ್ಕೂ ವಿಷಾದನೀಯ ಮತ್ತು ಖಂಡನೀಯ ಈ ವಿಚಾರಗಳನ್ನು ಬುಧರು ಯೋಚಿಸಿ ಚಿಂತನ ಮಂಥನ ನಡೆಸಬೇಕೆಂಬುದೆ ವೈಜ್ಞಾನಿಕ ನಿಲುವನ್ನು ತಳೆಯಬೇಕೆಂಬುದೆ ಈ ಪುಸ್ತಕದ ಉದ್ದೇಶ ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ, ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ, ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...
READ MORE