ಲೇಖಕಿ ದೀಪಾ ಹಿರೇಗುತ್ತಿ ಅವರ ಲೇಖನ ಕೃತಿ ʻಬ್ರ್ಯಾಂಡ್ ಬಿಲ್ಡರ್ಸ್, ಬಿತ್ತಿ ಬೆಳೆಸಿ ಬೆಳೆದವರುʼ. ಪುಸ್ತಕವು ಜಗತ್ತನ್ನೇ ಆಳುತ್ತಿರುವ ಸುಪ್ರಸಿದ್ದ ಕಂಪೆನಿಗಳು ಹುಟ್ಟಿ ಬೆಳೆದುಬಂದ ಕಥೆಗಳನ್ನು ಹೇಳುತ್ತದೆ. ತಂತ್ರಜ್ಞಾನದ ಪ್ರಭಾವದಲ್ಲಿ ಪ್ರತೀ ವರ್ಷ ಬೆಳೆದು ನಿಲ್ಲುವ ಲೆಕ್ಕವಿಲ್ಲದಷ್ಟು ಕಂಪೆನಿಗಳು ಆಧುನಿಕ ಜೀವನಶೈಲಿಯ ಒಂದು ಭಾಗವೇ ಆಗಿಹೋಗಿದೆ. ಆದರೆ, ಈ ಕಂಪನಿಗಳು ತಲುಪಿದ ಎತ್ತರ, ವರ್ಷ ವರ್ಷಗಳ ಪರಿಶ್ರಮದ ಫಲವಾಗಿರುತ್ತದೆ. ನಿಧಾನವಾಗಿ ಆದರೆ ದೃಢವಾಗಿ ಮೇಲೇರಿದ ಸಾಧನೆ ಇವುಗಳದ್ದಾಗಿರುತ್ತವೆ. ಆದರೆ, ಸಾಧನೆಯ ಹಿಂದೆ ಪ್ರತಿಯೊಬ್ಬ ಉದ್ಯಮಿಯ ಕಣ್ಣೀರು, ಹಸಿವಿನ ಸಂಕಟ, ಸೋಲು, ಭವಿಷ್ಯದ ಆತಂಕ, ಸಮಾಜದ ವ್ಯಂಗ್ಯ, ಅನಿರೀಕ್ಷಿತ ಏರಿಳಿತಗಳಿಂದಕೂಡಿದ ಸವಾಲಿನ ಬದುಕಿರುತ್ತದೆ. ಆದರೂ ಎಲ್ಲಾ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿಹೋಗುತ್ತಾ ತಮ್ಮ ಕನಸುಗಳನ್ನು ನಂಬಿ ಅಸಾಧ್ಯವಾದವುಗಳನ್ನು ಸಾಧ್ಯವಾಗಿಸಿಕೊಂಡ ಬಗೆಯನ್ನು ಕೇಳಿದರೆ ನಮ್ಮೆಲ್ಲ ಸಮಸ್ಯೆಗಳು ಏನೂ ಅಲ್ಲ ಎಂಬ ಅರಿವಾಗುತ್ತದೆ. ಬದುಕಿನಲ್ಲಿ ಸ್ಪೂರ್ತಿಸಿಗಬೇಕಾದರೆ ಇಂತಹವರ ಜೀವನ ಕತೆಗಳನ್ನು ಓದಬೇಕು. ಹಾಗಾಗಿ ಈ ಪುಸ್ತಕವು ಅಂಥಹ ಹಲವಾರು ಕತೆಗಳನ್ನು ಹೊಂದಿದ್ದು, ಓದಲೇ ಬೇಕಾದ ಪುಸ್ತಕವಾಗಿದೆ.
ಕವಿ, ಲೇಖಕಿ ದೀಪಾ ಹಿರೇಗುತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದವರು. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಕನ್ನಡದ ಸಶಕ್ತ ಅಂಕಣಗಾರ್ತಿ ಎಂಬುದನ್ನು “ನಾನು, ನೀವು ಮತ್ತು ...” ಅಂಕಣ ಬರಹಗಳ ಮೂಲಕ ಸಾಬೀತು ಪಡಿಸಿದ್ದಾರೆ. 'ಪರಿಮಳವಿಲ್ಲದ ಹೂಗಳ ಮಧ್ಯೆ' ಅವರ ಚೊಚ್ಚಲ ಕವನ ಸಂಕಲನ. ದಸರಾ ಕವಿಗೋಷ್ಠಿ, ಸಂಕ್ರಮಣ, ಪ್ರಜಾವಾಣಿ ಸಂಚಯ, ತಿಂಗಳು ಕವನಸರ್ಧೆಯಲ್ಲಿ ಬಹುಮಾನ, ಪ್ರಜಾವಾಣಿ - ವಿಮೋಚನಾ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಲೇಖಕರ ಸಂಘದಿಂದ ಕೊಡಮಾಡುವ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ...
READ MORE