ಕೀಸುಳಿ

Author : ರಿಯಾಜ್ ಪಾಷ

Pages 126

₹ 100.00




Year of Publication: 2020
Published by: ನವಸ್ಫೂರ್ತಿ ಪಬ್ಲಿಕೇಷನ್ಸ್
Address: #621, 1ನೇ ಫ್ಲೋರ್, 2ನೇ ತಿರುವು, 2ನೇ ಮುಖ್ಯರಸ್ತೆ, ಆರ್.ಬಿ.ಐ ಲೇಔಟ್, ಜೆ.ಪಿ. ನಗರ, 7 ಫೇಸ್, ಬೆಂಗಳೂರು

Synopsys

‘ಕೀಸುಳಿ’ ಆಧುನಿಕ ಕನ್ನಡ ಸಾಹಿತ್ಯದ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಪ್ರಧಾನ ಸಂಪಾದಕರಾಗಿ ರಿಯಾಜ್ ಪಾಷ, ಸಂಪಾದಕರಾಗಿ ಶಿವಕುಮಾರ್ ಆರ್.ಪಿ, ಕೆ.ವಿ. ಜಯಪ್ಪ, ಸಿ. ಕೊಟ್ರಪ್ಪ, ನಿಂಗರಾಜ ಹೆಚ್.ಎಸ್ ಅವರು ಕೃತಿಯನ್ನು ಸಂಪಾದಿಸಿರುತ್ತಾರೆ. ಇಲ್ಲಿರುವ ಲೇಖನಗಳಲ್ಲಿ ಹನ್ನೊಂದು ಲೇಖನಗಳು ಕಥೆ, ಕಾದಂಬರಿಗಳನ್ನು ಕುರಿತು ಆಳವಾದ ಅಧ್ಯಯನಕ್ಕೆ ಒಳಪಡಿಸಿ ಸಂಶೋಧಿಸಿದ್ದಾಗಿವೆ. ಆಧುನಿಕ ಕನ್ನಡ ಸಾಹಿತ್ಯದ ಉಗಮ, ಕುವೆಂಪು, ಕುಂ.ವೀರಭದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಕರೀಗೌಡ ಬೀಚನಹಳ್ಳಿ, ದೇವನೂರು ಮಹಾದೇವ ರವರ ಕಥೆ, ಕಾದಂಬರಿಗಳಲ್ಲಿಯ ಸಾಂಸ್ಕೃತಿಕ ಸಂಘರ್ಷ, ಗ್ರಾಮೀಣ ಬದುಕು, ಪ್ರತಿಭಟನಾ ಪಜ್ಞೆ ಬಹುಶಿಸ್ತೀಯ ಅಧ್ಯಯನ, ಸಮಕಾಲೀನತೆ, ಜಾನಪದ ಪ್ರಜ್ಞೆಗಳನ್ನು ಕುರಿತಾದಂತೆ ಲೇಖಕರು ಬೇರೆ ಬೇರೆ ಆಯಾಮಗಳಲ್ಲಿ ಚರ್ಚಿಸಿದ್ದಾರೆ. ಸಂಘರ್ಷವಿರದ ಸಮಾಜವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಎಲ್ಲೆಲ್ಲಿ ಸಂಘರ್ಷವಿರುತ್ತದೋ ಅಲ್ಲೆಲ್ಲಾ ಪ್ರತಿರೋಧ ಪ್ರತಿಭಟನೆಗಳು ಇರುವುದರಿಂದ ಆ ಪ್ರತಿಭಟನೆಗಳು, ಪ್ರತಿರೋಧಗಳು ಕಥೆ, ಕಾದಂಬರಿಗಳಲ್ಲಿ ಹೇಗೆ ಚಿತ್ರಿತವಾಗಿವೆ ಎನ್ನುವುದನ್ನು ಲೇಖಕರು ಬಹಳ ಸೂಕ್ಷ್ಮ ಪ್ರಜ್ಞೆಯಿಂದ ಗುರುತಿಸಿದ್ದಾರೆ.

About the Author

ರಿಯಾಜ್ ಪಾಷ

ರಿಯಾಜ್ ಪಾಷ ಅವರು ಪ್ರಸ್ತುತ ಯಲಹಂಕದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು” ವಿಷಯದ ಕುರಿತು ಸಂಶೋಧನೆ ನಡೆಸಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್‌ಡಿ ಪದವಿ ಪಡೆದಿದ್ದಾರೆ. ಕೃತಿಗಳು: ಜನಪದ ಸಾಹಿತ್ಯದಲ್ಲಿ ವರ್ಗ ಸಂಘರ್ಷದ ನೆಲೆಗಳು ...

READ MORE

Related Books