ಲೇಖಕ ಟಿ. ನಾಗರಾಜು ಅವರ ಲೇಖನ ಕೃತಿ ʻಕೂಗಿ ಹೇಳುತಿದೆ ಅಂತರಾಳʼ. ಟಿ. ನಾಗರಾಜು ಅವರು ಒಬ್ಬರು ಸಂಗೀತಗಾರರಾಗಿದ್ದು, ಆ ಕ್ಷೇತ್ರದಲ್ಲಿ ತಮಗೆ ಅನುಭವವಾದ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಂಗೀತ ಪ್ರಿಯರಿಗೆ ಕಲಾಲೋಕದ ಆಗುಹೋಗುಗಳನ್ನು, ಸಾಧ್ಯತೆಗಳನ್ನು ಚಿಂತಿಸಲು ಈ ಕೃತಿಯು ಉಪಯುಕ್ತವಾಗಲಿದೆ. ಪುಸ್ತಕದ ಮುನ್ನುಡಿಯಲ್ಲಿ ಕೆ.ವಿ. ಗಾಯತ್ರಿ ಅವರು, “ಪುಸ್ತಕದಲ್ಲಿ ಟಿ. ನಾಗರಾಜುರವರು ತಮ್ಮ ಸುದೀರ್ಘ ಸಂಗೀತ ಪಯಣದಲ್ಲಿ ಸಂಗೀತ ಸೇವಕರಾಗಿ, ಕಾರ್ಯಕರ್ತರಾಗಿ, ಸಂಘಟಕರಾಗಿ, ಕಲಾವಿದರ ಆತ್ಮೀಯ ಸ್ನೇಹಿತರಾಗಿ ಪಡೆದ ಅನುಭವಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ. ಕಲಾರಸಿಕರಿಗೆ ಕಲಾವಿದರ ಸಾಮೀಪ್ಯ ದೊರಕುವುದು ದುರ್ಲಭ. ಏನಿದ್ದರೂ ಅವರನ್ನು ನೋಡಿ, ಕೇಳಿ, ಆನಂದ ಪಡುವುದೊಂದೇ ಅವರ ಪಾಲಿಗೆ. ಆದರೆ, ಕಲಾಸಂಘಟಕರಿಗೆ ಕಲಾವಿದರ ಸಾಮೀಪ್ಯ, ಸ್ನೇಹ, ಸರ್ವೇಸಾಮಾನ್ಯ. ಇವರ ಮೂಲಕವಾದರೂ ಕಲಾವಿದರ ಭಾವನೆ, ಅಂತರಾಳ ತಿಳಿಯಬಹುದಾದರೂ, ಬಹಳಷ್ಟು ಸಂಘಟಕರು ತಮ್ಮ ಅನುಭವಗಳನ್ನು ಬರಹಕ್ಕೆ ಇಳಿಸುವುದು ವಿರಳ. ಈ ನಿಟ್ಟಿನಲ್ಲಿ ನಾಗರಾಜುರವರ ಕೊಡುಗೆ ವಿಶಿಷ್ಟವಾದದ್ದು. ಹಲವಾರು ದಶಕಗಳ ಶ್ರೇಷ್ಠ ಸಂಗೀತ ಕಲಾವಿದರೊಂದಿಗಿನ ಒಡನಾಟ, ಮಾತುಕತೆ, ಸಂಗೀತ ಲೋಕದ ಘಟನೆಗಳು, ಪ್ರತಿಭೆಗಳು, ಕಲಾವಿದರ ವ್ಯಕ್ತಿತ್ವ, ಜೀವನ ದೃಷ್ಟಿ, ಮುಂತಾದವುಗಳ ಮೇಲೆ ಬೆಳಕು ಬೀರುವ ನಾಗರಾಜುರವರ ಬರಹ ಅಭಿನಂದನೀಯ” ಎಂದು ಹೇಳಿದ್ದಾರೆ.
ಲೇಖಕ ಟಿ. ನಾಗರಾಜು ಅವರು ಕರ್ನಾಟಕ ಶಾಸ್ರ್ತೀಯ ಸಂಗೀತಗಾರರು. ಇವರ ಸಂಗೀತದ ಮೊದಲ ಗುರು ತಾಯಿ ಪಾರ್ವತಿ. ಸಂಗೀತ ಕ್ಷೇತ್ರದಲ್ಲಿ ತಮ್ಮ ಅನುಭವಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುತ್ತಾರೆ. ಎಲ್.ಐ..ಸಿ. ಕಂಪೆನಿಯಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ನಿವೃತ್ತಿಯನ್ನು ಹೊಂದಿದ್ದಾರೆ. ಕೃತಿಗಳು: ʻಕೂಗಿ ಹೇಳುತಿದೆ ಅಂತರಾಳʼ, ʻಸವಿನೆನಪುಗಳುʼ, ʻನೆನಪಿನಂಗಳʼ, ʻಅಡಿಗಡಿಗೂ ಗುರುವಂದನೆʼ ಇತ್ಯಾದಿ... ...
READ MORE