ಸಿಂದಗಿಯ ನೆಲೆ ಪ್ರಕಾಶನಕ್ಕೆ 40 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಣತಾಣದಲ್ಲಿ ಆಯೋಜಿಸಿದ್ದ‘ನೆಲೆ ಸಂಭ್ರಮ-2020' ಕಾರ್ಯಕ್ರಮದಲ್ಲಿ (ಜುಲೈ 19-ಆಗಸ್ಟ್ 11) ಮಂಡಿತವಾದ ವಿಚಾರಪೂರ್ಣ ಲೇಖನಗಳನ್ನು ಸಂಗ್ರಹಿಸಿದ್ದರ ಫಲವೇ ಈ ಕೃತಿ-ಸಂಕಥನ. ಶ್ರೀಶೈಲ ನಾಗರಾಳ ಸಂಪಾದಕರು.
ಲೇಖಕ ಡಾ. ಶ್ರೀಶೈಲ ನಾಗರಾಳ ಅವರು ಮೂಲತಃ ಅವಿಭಜಿತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಬಳಿಯ ಇಜೇರಿ ಗ್ರಾಮದವರು. ತಂದೆ- ಯಮನಪ್ಪ. ತಾಯಿ- ಬಸಮ್ಮ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ದಿಂದ ಪದವಿವರೆಗೂ ಶಿಕ್ಷಣ ಪೂರೈಸಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವೀಧರರು. ಡಾ ಎಂ ಎಂ ಕಲಬುರಗಿ ಅವರ ವೀರಶೈವ ಸಾಹಿತ್ಯ ಸಂಶೋಧನೆ (2001) ಕುರಿತು ಎಂ.ಫಿಲ್ ನಂತರ 'ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಜೀವನ ಮತ್ತು ಕೃತಿಗಳು' ವಿಷಯವಾಗಿ ಪಿ.ಎಚ್.ಡಿ (2007) ಪದವೀಧರರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಜಿ.ಡಿ.ಎ.ಎಸ್ (ಡಾ. ಅಂಬೇಡ್ಕರ್ ಸ್ಟಡಿ) ಪದವೀಧರರು. ಕನ್ನಡ ಜಾನಪದ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ...
READ MORE