“ಸಾಹಿತ್ಯ ಸಹವಾಸ” ಎಸ್. ವಿ. ಮಂಜುನಾಥ್ ಮತ್ತು ಮಹೇಶ್ ಕುಮಾರ್ ಸಿ. ಎಸ್ ಅವರ ಸಂಪಾದಿತ ಕೃತಿಯಾಗಿದೆ. ಇಲ್ಲಿ ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರೆಹಗಾರರಾದ ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣ ಅಡಿಗ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎ.ಕೆ. ರಾಮಾನುಜನ್ ಮತ್ತು ಗಿರೀಶ್ ಕಾರ್ನಾಡ್ ಅವರ ಕೊಡುಗೆಗಳ ಬಗೆಗಿರುವ ವಿಚಾರಗಳನ್ನು ಕಾಣಬಹುದು. ಅಷ್ಟೇಅಲ್ಲದೆ ದಲಿತ ಮುಂತಾದ ಪ್ರಮುಖ ಸಾಹಿತ್ಯಕ ಚಳವಳಿಗಳ ಕುರಿತಾಗಿಯು ಮಾಹಿತಿಯಿದೆ. ಕನ್ನಡ ಭಾಷೆಯ ಕುರಿತಾಗಿ ಅನಂತಮೂರ್ತಿಯವರು ನೀಡಿರುವ ಉಪನ್ಯಾಸಗಳನ್ನು ಇಲ್ಲಿನ ಜೀವಾಳವಾಗಿದ್ದು, ಈ ಉಪನ್ಯಾಸಗಳನ್ನು ಬರೆಹ ರೂಪದಲ್ಲಿ ಇಲ್ಲಿ ಪ್ರಕಟಿಸಲಾಗಿದೆ. ಸಾಹಿತಿಗಳು ಹಾಗೂ ಚಳವಳಿಗಳ ಮೇಲೆ ಅವರು ನೀಡಿರುವ ಉಪನ್ಯಾಸಗಳು ತನ್ನನ್ನು ರೂಪಿಸಿದ ಅಥವಾ ತಾನೇ ಸಾಕ್ಷಿಯಾಗಿದ್ದ ವಿಚಾರ ಮತ್ತು ವ್ಯಕ್ತಿಗಳೊಂದಿಗಿನ ಅನುಸಂಧಾನದ ಕುರಿತಾಗಿ ಮಾಗಿದ ವ್ಯಕ್ತಿತ್ವವೊಂದರ ಸಾಮಾಜಿಕ/ಚಾರಿತ್ರಿಕ ದಾಖಲೆಯಾಗಿದೆ. ಈ ವಿಷಯಗಳನ್ನು ಅವರು ಪರಿಶೀಲಿಸಿ, ಸೂತ್ರೀಕರಿಸಿರುವ ರೀತಿ, ನೀಡಿರುವ ದೃಷ್ಟಿಕೋನಗಳು ಈ ವಿಷಯಗಳಿಗೆ ಪ್ರವೇಶಿಸುವವರಿಗೆ ಮತ್ತು ಆಳವಾಗಿ ಅಧ್ಯಯನ ಮಾಡುವವರಿಗೆ ಆಕರ ಕೃತಿಯಾಗಿ ನಿಲ್ಲುತ್ತದೆ.
ಲೇಖಕ, ಸಂಶೋಧಕ, ಪ್ರಕಾಶಕರೂ ಆಗಿರುವ ಮಹೇಶ್ ಕುಮಾರ್ ಸಿ.ಎಸ್ ಅವರು ಮೂಲತಃ ಬೆಂಗಳೂರಿನ ಚಿಕ್ಕನಹಳ್ಳಿ ಗ್ರಾಮದವರು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂ.ಎ ಪದವಿ ಪಡೆದ ಮಹೇಶ್ ಅವರು ಯೂರೋಪ್ ಬೆಲ್ಜಿಯಂನ ಫೆಂಟ್ ವಿಶ್ವವಿದ್ಯಾನಿಲಯದಿಂದ ಫೇಲೋಶಿಪ್ ಪಡೆದು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ಪೂರ್ಣಗೊಳಿಸಿದ್ದಾರೆ. ಜೊತೆಗೆ ಭಾರತ ಸರಕಾರದ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದಿಂದ ಡಾ. ರಾಧಕೃಷ್ಣ 2015-17ನೇ ಸಾಲಿನಲ್ಲಿ ಪೋಸ್ಟ್ ಡಾಕ್ಟ್ರಲ್ ಫೆಲೋ ಆಗಿ ಆಯ್ಕೆಯಾಗಿದ್ದರು. ಕಳೆದ 13 ವರ್ಷಗಳಿಂದ ಇಸ್ಲಾಂ ಮತ್ತು ಭಾರತೀಯ ಸಂಪ್ರದಾಯಗಳ ಒಡನಾಟದ ಬಗೆಗೆ ಸಂಶೋಧನೆ ನಡೆಸುತ್ತಿರುವ ಮಹೇಶ್ ಅವರು ಈ ವಿಚಾರವಾಗಿ ಎರಡು ...
READ MORE