ಕೃಷಿ ವಿಜ್ಞಾನಿ, ಲೇಖಕ ಕೆ.ಎನ್, ಗಣೇಶಯ್ಯ ಅವರ ಕೃತಿ ’ವಿ-ಚಾರಣ’.
ಮನುಷ್ಯನ ವೈಯಕ್ತಿಕ ಹಾಗೂ ಸಮೂಹ ವರ್ತನೆಗಳನ್ನು ಅರಿಯಲು ಮತ್ತೊಬ್ಬ ವ್ಯಕ್ತಿ ಕಾಣಸಿಗುತ್ತಾನೆ. ಆಗ ಮನುಷ್ಯನಿಗೂ, ಪ್ರಾಣಿಗಳಿಗೂ ವರ್ತನೆಗಳ ನಂಟು ಅರಿವಾಗುತ್ತಾ, ಮನುಷ್ಯ ಜೀವಿಗಳ ವರ್ತನೆಯಲ್ಲೂ ಗೊರಿಲ್ಲಾ, ಹುಲಿ, ಕೋಗಿಲೆಯ ದನಿ, ನವಿಲಿನ ಲಾಸ್ಯವಿದೆ ಎಂಬ ಅರಿವು ಸಹಜವಾಗಿ ಮೂಡುತ್ತದೆ. ಹೀಗೆ ಮನುಷ್ಯ ವರ್ತನೆಗಳ ವಿಕಾಸದ, ವಿಕಾಸದ, ವಿಚಾರಗಳ ನಡುವಣ ಚಾರಣವೇ -ವಿ-ಚಾರಣ’ ಕೃತಿ.
ನಮ್ಮೊಳಗಿನ 'ಪ್ರಾಣಿ'ಗೆ ಮೂಗುದಾರವಾದ ಸಾಂಸ್ಕೃತಿಕ ವಿಕಾಸ , ತಟ್ಟೆಗೂ ತುಟಿಗೂ ಮಧ್ಯೆ ಏಕೆ ಆಯುಧಗಳು? , ಬಾಲ ಕಳೆದುಕೊಂಡ ನಾವು ಏನೆಲ್ಲ ಮಾಡಿಕೊಂಡೆವು!, ಧರ್ಮಕ್ಕೆ ದಾಸ್ಯವಾಗಿರುವ ಮನೋನಾಲಿಗೆಗಳು ಸಾವಿನಾಚೆಗೂ ಬದುಕಲಿಚ್ಚಿಸುವ ಮನೋಧಾತುಗಳು , ಮಾನವಾವತಾರವ ರೂಪಿಸಿದ ನಾಳೆ ಎಂಬ ಮರೀಚಿಕೆ , ಹೆಸರುಗಳಿಸುವ ಉರುಳಿಗೆ ಮರುಳಾದ ಮಾನವ , ಎಷ್ಟು ಜನರ ಕಂದನೋ ನೀನು ಓ ಮಾನವ? ,ನಗುವನೂ ನಕಲೀಕರಣಗೊಳಿಸಿದ ಮನುಕುಲ ,ಭಾವನಾ ಪ್ರಪಂಚದ ಬಾಗಿಲು ತೆರೆದ ಇಲಿಗಳ ನಗು ,ನಾವು ಎಂದು ಮತ್ತು ಏಕೆ ಮಾಂಸಾಹಾರಿಗಳಾದೆವು?, ತ್ಯಾಗದ ನೆರಳಲ್ಲೂ ಸ್ವಾರ್ಥದ ಛಾಯೆ , ಖಾಲಿ ಕುರ್ಚಿಗೆ ಸಾಲುಗಟ್ಟಿ ನಿಂತ ಬಸವನ ಏಡಿಗಳು ಮುಂತಾದ ಬರಹಗಳನ್ನು ಈ ಕೃತಿಯಲ್ಲಿ ಕಾಣಬಹುದು.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE