‘ಮಹಿಳೆ ಒಂದು ಅಧ್ಯಯನ’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗೆ ಪ್ರಸ್ತುತವಾಗಿವೆ. ‘ನಮ್ಮ ಶಾಸ್ತ್ರ ಗ್ರಂಥಗಳಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನವನ್ನೇನೋ ನೀಡಲಾಗಿದೆ. ಆದರೆ ವಾಸ್ತವ ಅದಕ್ಕೆ ತದ್ವಿರುದ್ಧವಾಗಿತ್ತು. ಪುರುಷರೊಂದಿಗೆ ಸಮಾನ ಬಾಳ್ವೆ ನಡೆಸುವ ಅವಕಾಶಗಳಿಂದ ಮಹಿಳೆಯರು ವಂಚಿತರಾಗಿದ್ದುದು, ಶೋಷಣೆಗೊಳಗಾಗಿದ್ದುದು ಗುಟ್ಟಿನ ಸಂಗತಿಯೇನಲ್ಲ. ಇತ್ತೀಚೆಗೆ ಪರಿಸ್ಥಿತಿ ಸಾಕಷ್ಟು ಬದಲಾಗುತ್ತಿದೆ. ಶಿಕ್ಷಣದ ಮೂಲಕ ಜಾಗೃತರಾಗಿರುವ ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮವಾಗಿ ಕಾರ್ಯಮಾಡಲು, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಮರ್ಥರಾಗಿದ್ದಾರೆ. ಈ ಕೃತಿಯಲ್ಲಿ ಹಿಂದಿನ ಮತ್ತು ಇಂದಿನ ಮಹಿಳೆಯರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವಂಥ 'ಲಜ್ಜಾಗೌರಿ : ಜೀವೋತ್ಪತ್ತಿಯ ಪ್ರತೀಕ, 'ಪ್ರಾಚೀನ ಸ್ತ್ರೀ ಶಿಕ್ಷಣ', 'ಮಿತಾಕ್ಷರದಲ್ಲಿ ಮಹಿಳೆ', 'ಮಹಾಸತಿ : ಅಳಿದುಳಿದ ರೂಪ', ಹಾಗೂ 'ಇರಾವತಿ ಕರ್ವೆ ಮತ್ತು ಯುಗಾಂತ' ಮುಂತಾದ ವಿಚಾರ ಪ್ರಚೋದಕ ಲೇಖನಗಳಿವೆ. ಅಪರೂಪದ ರೇಖಾಚಿತ್ರಗಳಿವೆ’ ಎಂದು ಹೇಳಲಾಗಿದೆ.
ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...
READ MORE