‘ನಗುತಾ ಮಾರಿದೆ ಲಾಭ ಮಾಡಿದೆ’ ದಶರಥ ಅವರ ಬಿಸಿನೆಸ್ ಸೀಕ್ರೆಟ್ಸ್ ಕೃತಿಯಾಗಿದೆ. ಕೃತಿಯಲ್ಲಿ ಬಿಸಿನೆಸ್ ಗೆಲ್ಲುವ ಟೆಕ್ನಿಕ್ಸ್ ಅನ್ನು ಹೀಗೆ ನೀಡಲಾಗಿದೆ; 1. ವ್ಯವಹಾರ ತಿಳಿದಿರಬೇಕು. ಶಿಸ್ತಾಗಿರಬೇಕು. ರಿಸ್ಕ್ ಅರ್ಥ ಮಾಡಿಕೊಂಡಿರಬೇಕು. ಎಂಬೆಲ್ಲಾ ಟಿಪ್ಸ್ ಸಾಮಾನ್ಯವಾಗಿ ಸಿಕ್ಕಿರುತ್ತದೆ. ಇವೆಲ್ಲಾ ನಿಜವಿರಬಹುದು. ಆದರೆ ಅವೆಲ್ಲಕ್ಕಿಂತ ಮುಖ್ಯವಾದದ್ದೆಂದರೆ ನೀವು ನಿಮ್ಮ ಮುಖವನ್ನು ಗಂಟಿಕ್ಕಿಕೊಂಡಿರಬಾರು. 2. ಬಿಸಿನೆಸ್‌ನಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ನಿಮ್ಮ ಸಾಮರ್ಥ್ಯ, ಪ್ರತಿಭೆ, ಕೌಶಲ್ಯ ಎಷ್ಟು ಕೆಲಸಕ್ಕೆ ಬರುತ್ತದೋ ಇಲ್ಲವೋ. ಸೆನ್ಸ್ ಆಫ್ ಹ್ಯೂಮರ್ ಮಾತ್ರ ಎಲ್ಲಾ ಸಂದರ್ಭಗಳಲ್ಲೂ ನಿಮ್ಮನ್ನು ಕಾಪಾಡುತ್ತದೆ. 3. ವ್ಯವಹಾರಕ್ಕೆ ಸಂಬಂಧಪಟ್ಟವರನ್ನು ಅಥವಾ ನಿಮ್ಮ ಮಳಿಗೆಗೆ ಬರುವ ಗ್ರಾಹಕರನ್ನು ಹತ್ತಿರ ಮಾಡಿಕೊಂಡಷ್ಟೂ ಒಳ್ಳೆಯದು. ಅವರು ನಂಗೆ ತುಂಬಾ ಕ್ಲೋಸು ಎಂಬ ಭಾವ ಗ್ರಾಹಕನಿಗೆ ಬಂದರೆ ನೀವು ಸೇಫು. 4. ನಗುವ ಅಥವಾ ನಗಿಸುವ ಕಲೆ ಹುಟ್ಟಿನಿಂದಲೇ ಬರಬೇಕು ಅಂತೇನಿಲ್ಲ. ಅದನ್ನು ಕಲಿಯಬಹುದು. ಕಲಿತು ಬಳಸಿ ಗೆಲ್ಲಬಹುದು. 5. ಈ ಮೇಲಿನ ಎಲ್ಲಾ ಪಾಯಿಂಟುಗಳನ್ನು ಕರಗತ ಮಾಡಿಕೊಳ್ಳುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಈ ಪುಸ್ತಕವನ್ನು ಓದಬಹುದು.
ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...
READ MORE