ಲೇಖಕ ರಾಧಾಕೃಷ್ಣ ಭಡ್ತಿ ಅವರ ಲೇಖನಗಳ ಸಂಗ್ರಹ ʻನೀರಸಾಧಕರುʼ. ಭಾರತದಲ್ಲಿ ಕೃಷಿ ಎಂದರೆ ವೃತ್ತಿಯಷ್ಟೇ ಅಲ್ಲ, ಅದು ಜೀವನಧರ್ಮ ಎಂದು ಹೇಳುವ ಈ ಪುಸ್ತಕವು ಇವರ ಉಳಿದ ಎಲ್ಲಾ ಲೇಖನಗಳ ಹಾಗೆ ನೀರಿನ ಕುರಿತಾಗಿ ಹೇಳುತ್ತದೆ. ಇಲ್ಲಿ ನೀರಿನ ಜೊತೆ ಅದನ್ನು ಅವಲಂಬಿಸಿರುವ ಕೃಷಿ, ರೈತರು ಮಳೆಯನ್ನು ಸಂಗ್ರಹಿಸುವ ವಿಧಾನಗಳು ಹಾಗೂ ಬರಡು ಭೂಮಿಯನ್ನು ಹಚ್ಚಹಸುರಾಗಿಸುವ ವಿದ್ಯೆಗಳ ಕುರಿತಾಗಿಯೂ ಮಾತನಾಡಿದ್ದಾರೆ. ಅದರಲ್ಲೂ ಕಾಲುವೆ ಪಕ್ಕದ 72 ರೈತರು ನಯಾಪೈಸೆ ಪರಿಹಾರ ಕೇಳದೆ ತಮ್ಮ ಜಮೀನನ್ನು ಬಿಟ್ಟುಕೊಟ್ಟ ಸಂಗತಿಯು ತುಂಬಾ ವಿಶೇಷವಾಗಿದೆ.
ಪತ್ರಕರ್ತ- ಅಂಕಣಕಾರ ರಾಧಾಕೃಷ್ಣ ಎಸ್. ಭಡ್ತಿ ಅವರು ನೀರು ಮತ್ತು ನೀರಿಗೆ ಸಂಬಂಧಿಸಿದ ವಿಷಯಗಳಲ್ಲಿ ಅವಿರತವಾಗಿ ಬರೆಯುತ್ತಿರುವ ಲೇಖಕ. ಅವರ ಬಹುತೇಕ ಬರೆಹಗಳು ನೀರಿಗೆ ಸಂಬಂಧಿಸಿದವುಗಳಾಗಿರುವುದು ವಿಶೇಷ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ನೀರಿನ ಮಹತ್ವ, ನೀರು ಸಂಗ್ರಹದ ಪಾರಂಪರಿಕ ವಿಧಾನಗಳನ್ನು ಅಂಕಣಗಳನ್ನು ಬರೆದು ಪ್ರಕಟಿಸಿರುವ ಭಡ್ತಿ ಅವರು ಸದ್ಯ ’ಹಸಿರುವಾಸಿ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದಾರೆ. ನೀರನ್ನು ಕುರಿತ ಅವರ ಹಲವು ಪುಸ್ತಕಗಳು ಪ್ರಕಟವಾಗಿವೆ. ...
READ MORE