ಕತ್ತಲೆಯಿಂದ ಬೆಳಕಿನೆಡೆಗೆ

Author : ಚಂದ್ರಕಾಂತ ಪೋಕಳೆ

Pages 128

₹ 84.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಕತ್ತಲೆಯಿಂದ ಬೆಳಕಿನೆಡೆಗೆ’ ಕೃತಿಯು ಚಂದ್ರಕಾಂತ ಪೋಕಳೆ ಅವರ ಕನ್ನಡ ಅನುವಾದಿತ ಲೇಖನ ಸಂಕಲನವಾಗಿದ್ದು, ಕೃತಿಯ ಮೂಲ ಲೇಖಕ ನರೇಂದ್ರ ದಾಭೋಲ್ಕರ್. ಈ ಕೃತಿಯು ಹಲವಾರು ವಿಚಾರಗಳನ್ನು ಪ್ರಸ್ತಾಪಿಸುತ್ತದೆ; ನಮ್ಮ ಪಾಪ-ಕರ್ಮ-ಪೂರ್ವಜನ್ಮ - ಗ್ರಹಚಾರಗಳ ಕತೆ ಹೇಳಿ ನಂಬಿಸಿ ನಮ್ಮನ್ನು ವಂಚಿಸಲಾಗುತ್ತದೆ. ನಿಮ್ಮ ನಿಮ್ಮ ಮಕ್ಕಳ ಜಾತಕದಲ್ಲಿ ಮಾರಣಾಂತಿಕ ದೋಷ ಇದೆಯೆಂದೂ ಪೂಜೆ-ಹವನ-ಹೋಮ ದೇವಾಲಯ ದರ್ಶನ ಮಾಡಿದರೆ ಮಾತ್ರ ಪರಿಹಾರವಾಗುವುದೆಂಬ ಅವರ ಬತ್ತಳಿಕೆಯ ಬಾಣಗಳಿಗೆ ನಾವು ಹೆದರಿ ಕಂಗಾಲಾಗುತ್ತೇವೆ. ಮೊದಲೇ ಗ್ರಹಚಾರ ಸರಿ ಇಲ್ಲದ ನಾವು ಅವರನ್ನು ಎದುರುಹಾಕಿಕೊಳ್ಳುವುದುಂಟೇ ? ನಮ್ಮ ಅಮೂಲ್ಯ ಸಮಯ, ಬೆವರಿಳಿಸಿ ದುಡಿದ ಹಣ ಎರಡನ್ನೂ ವ್ಯಯಿಸುತ್ತೇವೆ. ಅವರು ಇನ್ನಷ್ಟು ಬಲಾಢರಾಗುತ್ತಾರೆ. ಇನ್ನಷ್ಟು ಜನರಿಗೆ ಮಂಕುಬೂದಿ ಎರಚುತ್ತಾರೆ. ಈ ಕೃತಿಯಲ್ಲಿ ಇಂಥ ಹಲವಾರು ಸಂಗತಿಗಳನ್ನು ಪ್ರಸ್ತಾಪಿಸಿ ನಿಮಗೆ ಅಮೂಲ್ಯ ಸಲಹೆ ನೀಡಿ ಅಜ್ಞಾನದಿಂದ ಜ್ಞಾನದ ಕಡೆಗೆ ಹೊರಳುವ ದಾರಿ ತೋರಲಾಗಿದೆ

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Reviews

(ಹೊಸತು, ಅಕ್ಟೋಬರ್ 2014, ಪುಸ್ತಕಜದ ಪರಿಚಯ)

ನಮ್ಮಲ್ಲಿ ಬೇರೂರಿರುವ ಮೂಢನಂಬಿಕೆಗಳನ್ನು ಗುರುತಿಸಿ ಅವನ್ನು ಹೋಗಲಾಡಿಸಲು ಈ ಲೇಖನಗಳು ಕರೆ ನೀಡುತ್ತವೆ. ಮೌಡ್ಯದ ಬಲೆಗೆ ಬಿದ್ದು ಯಾವುದನ್ನು ನಾವು ತ್ಯಜಿಸಬೇಕು ಮತ್ತು ಏನನ್ನು ಅಂಗೀಕರಿಸಬೇಕೆಂದು ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಯಾರೋ ಹೇಳಿದರೆಂದು ನಮ್ಮ ಸಂಕಷ್ಟಗಳ ಪರಿಹಾರಕ್ಕಾಗಿ ಜ್ಯೋತಿಷಿ-ಬಾಬಾ-ಮಂತ್ರವಾದಿಗಳ ಮೊರೆಹೋಗುತ್ತೇವೆ. ನಮ್ಮ ಪಾಪ-ಕರ್ಮ - ಪೂರ್ವಜನ್ಮ - ಗ್ರಹಚಾರಗಳ ಕತೆ ಹೇಳಿ ನಂಬಿಸಿ ನಮ್ಮನ್ನು ವಂಚಿಸ ಲಾಗುತ್ತದೆ. ನಿಮ್ಮ. ನಿಮ್ಮ ಮಕ್ಕಳ ಜಾತಕದಲ್ಲಿ ಮಾರಣಾಂತಿಕ ದೋಷ ಇದೆಯೆಂದೂ ಪೂಜೆ-ಹವನ-ಹೋಮ ದೇವಾಲಯ ದರ್ಶನ ಮಾಡಿದರೆ ಮಾತ್ರ ಪರಿಹಾರವಾಗುವುದೆಂಬ ಅವರ ಬತ್ತಳಿಕೆಯ ಬಾಣಗಳಿಗೆ ನಾವು ಹೆದರಿ ಕಂಗಾಲಾಗುತ್ತೇವೆ. ಮೊದಲೇ ಗ್ರಹಚಾರ ಸರಿ ಇಲ್ಲದ ನಾವು ಅವರನ್ನು ಎದುರುಹಾಕಿಕೊಳ್ಳುವುದುಂಟೇ ? ನಮ್ಮ ಅಮೂಲ್ಯ ಸಮಯ, ಬೆವರಿಳಿಸಿ ದುಡಿದ ಹಣ ಎರಡನ್ನೂ ವ್ಯಯಿಸುತ್ತೇವೆ. ಅವರು ಇನ್ನಷ್ಟು ಬಲಾಢರಾಗುತ್ತಾರೆ. ಇನ್ನಷ್ಟು ಜನರಿಗೆ ಮಂಕುಬೂದಿ ಎರಚುತ್ತಾರೆ. ಈ ಕೃತಿಯಲ್ಲಿ ಇಂಥ ಹಲವಾರು ಸಂಗತಿಗಳನ್ನು ಪ್ರಸ್ತಾಪಿಸಿ ನಿಮಗೆ ಅಮೂಲ್ಯ ಸಲಹೆ ನೀಡಿ ಅಜ್ಞಾನದಿಂದ ಜ್ಞಾನದ ಕಡೆಗೆ ಹೊರಳುವ ದಾರಿ ತೋರಲಾಗಿದೆ. ನಿಮ್ಮ ಶ್ರದ್ಧೆ ನಂಬಿಕೆಗಳನ್ನು ಉಳಿಸಿಕೊಂಡೇ ಅಂಧಶ್ರದ್ಧೆ-ಮೂಢನಂಬಿಕೆಗಳನ್ನು ಹೋಗಲಾಡಿಸುವ ಬಗೆಗೆ ತಿಳಿಯಹೇಳಲಾಗಿದೆ.

Related Books