ಬೆಸುಗೆಯ ಹಾದಿ

Author : ರೋಹಿಣಾಕ್ಷ ಶಿರ್ಲಾಲು

Pages 164

₹ 125.00




Year of Publication: 2021
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ , ಜಯನಗರ, ಬೆಂಗಳೂರು- 560 011
Phone: 7892106719

Synopsys

ಲೇಖಕ ರೋಹಿಣಾಕ್ಷ ಶಿರ್ಲಾಲು ಅವರ ಲೇಖನಗಳ ಸಂಗ್ರಹ ಬೆಸುಗೆಯ ಹಾದಿ. ನಾಡಿನೊಳಿತಿಗಾಗಿ ಕೂಡಿ ಬಾಳೋಣ ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, 80 ವಾರಗಳ ಕಾಲ 80 ವೈವಿಧ್ಯಮಯ ವಿಷಯಗಳ ಮೇಲೆ ಅಧ್ಯಯನಪೂರ್ಣ ಲೇಖನಗಳು ಈ ಸಂವಾದ ಅಂಕಣದಲ್ಲಿ ಪ್ರಕಟವಾಗಿದೆ. ಸಂವಾದ ಅಂಕಣದ ಮೊದಲ ಅಂಕಣದ ತಲೆ ಬರೆಹ ನನ್ನ ಮನಸ್ಸಿನಲ್ಲಿ ಸದಾ ಅಚ್ಚೊತ್ತಿದೆ. ಮೀಸಲಾತಿ ಇನ್ನೂ ಬೇಕಾ ಎಂದು ಕೇಳುವವರಿಗೆ ಸಂವಾದ ಸರಣಿಯ ಮೊದಲ ಅಂಕಣದಲ್ಲಿ ರೋಹಿಣಾಕ್ಷ ಅವರು ಜಬರ್ ದಸ್ತ್ ಉತ್ತರ ಕೊಟ್ಟಿದ್ದಾರೆ. "ಮೀಸಲಾತಿಯ ಪರಿಣಾಮಕಾರಿ ಜಾರಿಯಿಂದ ಮಾತ್ರ ಭಾರತ ವಿಶ್ವಗುರು ಆಗಬಹುದು ಎಂಬುದನ್ನು ಮೊದಲ ಅಂಕಣದಲ್ಲಿ ರೋಹಿಣಾಕ್ಷ ಅವರು ಮನಮುಟ್ಟುವಂತೆ ತರ್ಕ, ವಿಶ್ಲೇಷಣೆ, ಸಮರ್ಥನೆ,ಉದಾಹರಣೆಗಳ ಮೂಲಕ ಮೂಲಕ ಉತ್ತರ ಕೊಡುತ್ತಾರೆ. ಅಷ್ಟು ಮಾತ್ರವಲ್ಲ, ಎರಡನೇ ಲೇಖನದಲ್ಲಿ ಮೀಸಲಾತಿ ವಂಚಿತ ದಲಿತರ ಬಾಳಿಗೆ ಹೊಸ ಭಾಗ್ಯೋದಯವಾಗಲಿ ಎಂಬ ಆಶಯವನ್ನು ಅರ್ಥಪೂರ್ಣವಾಗಿ ತೋಡಿಕೊಳ್ಳುತ್ತಾರೆ. ಮೂರನೇ ಲೇಖನದಲ್ಲಿ ಸಹಪಂಕ್ತಿ ಭೋಜನ-ಸಮಾನತೆಯ ಸಾಕಾರಕ್ಕೆ ತೆರೆಯುವ ಬಾಗಿಲು ಎಂಬ ವಾದವನ್ನು ಮನೋಜ್ಞವಾಗಿ ವಿವರಿಸುತ್ತಾರೆ. ಮೀಸಲಾತಿ ಸಾಮಾಜಿಕ ಸಮಾನತೆಯ ಅಗತ್ಯದ ಕುರಿತ ರೋಹಿಣಾಕ್ಷ ಅವರ ಈ ಖಚಿತ ನಿಲುವಿನ ಹಿಂದೆ ಅವರು ಸ್ವತಃ ಹೊಂದಿರುವ ಸಾಮಾಜಿಕ ಹಿನ್ನೆಲೆ ಹಾಗೂ ಸಾಮಾಜಿಕ ಜೀವನದ ಅನುಭವ ಬಹುಶಃ ಕಾರಣ ಇರಬಹುದೆಂದು ಭಾವಿಸಿದ್ದೇನೆ. ಜಾತಿ ವ್ಯವಸ್ಥೆಯ ಕುರಿತ ರೋಹಿಣಾಕ್ಷ ಅವರ ನಿಲುವು ಕೂಡ ವಿಶೇಷವಾದದ್ದು. ಜಾತಿ ವ್ಯವಸ್ಥೆ ಎಂಬುದು ಸಾಮಾಜಿಕ ವಾಸ್ತವ ಎಂಬ ವಾದವನ್ನು ಅವರು ಮುಂದಿಡುತ್ತಾರೆ. ಅಷ್ಟು ಮಾತ್ರವಲ್ಲ, ಜಾತಿ ನಿರಾಕರಿಸುವ ಬದಲು ಅದನ್ನು ಮೀರಿ ಒಂದಾಗಿ ನಿಲ್ಲುವ ವಿವೇಚನೆ ಆಗಬೇಕಾದದ್ದು ಎಂದು ಹೇಳುತ್ತಾರೆ. ಹಾಗೇ ಮುಂದುವರೆದ ಜಾತಿ ವ್ಯವಸ್ಥೆಗಳ ನಡುವೆ ಸಾಮಾಜಿಕ ಸಾಮರಸ್ಯ, ಹೊಂದಾಣಿಕೆಯ ಬದುಕು ಸಾಕಾರವಾಗಲಿ ಆಶಿಸಿ, ಅದು ಸಾಕಾರವಾಗುವ ಮಾರ್ಗವನ್ನು ಸೂಚಿಸುತ್ತಾರೆ ಎಂದಿದ್ದಾರೆ.

About the Author

ರೋಹಿಣಾಕ್ಷ ಶಿರ್ಲಾಲು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇಲ್ಲಿ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ಲಾಲು ಗ್ರಾಮದವರು. 2005ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪೂರೈಸಿರುತ್ತಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ ಅನೇಕ ರಾಷ್ಟ್ರೀಯ – ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಇವರು ಯುವ ತಲೆಮಾರಿನ ಭರವಸೆಯ ಲೇಖಕರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಮಾಡಿದ ...

READ MORE

Related Books