‘ಸಾವಿರದ ಸತ್ಯ’ ಕೃತಿಯು ವಿರೂಪಾಕ್ಷ ಬಡಿಗೇರ ಅವರ ಲೇಖನಸಂಕಲನವಾಗಿದೆ. ಹಲವಾರು ಸಂದೇಶಗಳನ್ನು ಹೊತ್ತು ತಂದಿರುವ ಈ ಕೃತಿಯು ಮನಸ್ಸಿನ ಮೇಲೆ ಆಳವಾದ ಪ್ರಭಾವನ್ನು ಬೀರುತ್ತದೆ. ಹಿರಿಯರು ಕಿರಿಯರಿಗೆ ನೀಡುವಂತಹ ಸಂದೇಶದ ಮಾತುಗಳು ಇಲ್ಲಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಉತ್ತಮ ವಿಚಾರಗಳನ್ನು ಕಟ್ಟಿಕೊಡುತ್ತದೆ.
ವಿರೂಪಾಕ್ಷ ಬೆಳವಾಡಿ, ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯವರು. ಸುಮಾರು 25 ವರ್ಷಗಳಿಂದ ಯೋಗಕ್ಷೇತ್ರದಲ್ಲಿದ್ದು ನಾಡಿನಾದ್ಯಂತ ಯೋಗದ ಮೂಲಕ ಆರೋಗ್ಯವೃದ್ಧಿಗೆ ಶ್ರಮಿಸುತ್ತಿದ್ದಾರೆ. ಯೋಗಕ್ಷೇಮ ಎಂಬ ಸಂಸ್ಥೆಯ ಮೂಲಕ ಯೋಗ ಶಿಬಿರಗಳನ್ನು ನಡೆಸುತ್ತಿದ್ದು, ಸೂರ್ಯೋಪಾಸನೆ, ಸಂಸ್ಕಾರ ಸಿಂಚನ ,ಜನನಿ, ಸಾಧನಗಳೊಂದಿಗೆ ಯೋಗಸಾಧನೆ ಎಂಬ 7 ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯಲೋಕ ಪಬ್ಲಿಕೇಷನ್ಸ್‌ನಿಂದ ಸಾವಿರದ ಸತ್ಯ ,ಜನನಿ,ಆತ್ಮದರ್ಶನ ಎಂಬ 3 ಪುಸ್ತಕಗಳು ಪ್ರಕಟವಾಗಿವೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಡೈಲಿಯೋಗ" ಎಂಬ ಹೆಸರಿನ ಯೋಗಕ್ಕೆ ಸಂಬಂಧಿಸಿದಂತೆ 650ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದು, ಇವರ ಯೋಗಸಾಧನೆ ಗುರುತಿಸಿ 2018ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ನಾಡ ಭೂಷಣ ಪ್ರಶಸ್ತಿ ಲಭಿಸಿದೆ. ...
READ MORE