‘ಶೂನ್ಯ’ ಶ್ರೀಶ ಬೆಳಕವಾಡಿ ಅವರ ಲೇಖನ ಸಂಕಲನ. ಮನುಕುಲವನ್ನು ಸದಾ ಕಾಡುವ, ಬದಲಾಗುವ ವಿಸ್ಮಯ ಜಗತ್ತಿನ ರೋಚಕಗಳನ್ನು ಸಾಮಾನ್ಯನ ಮುಂದಿಡುವ ಪ್ರಯತ್ನವೇ ಈ ಬರೆಹ.
ಜಾಗೃತಾತ್ಮಕ್ಕೆ ಅಸ್ತಿತ್ವವು ಸರ್ವವ್ಯಾಪಿ, ಧ್ಯಾನಾಚರಣೆಯಲ್ಲಿ ಭಂಗ ತರುವ ಬಾಧಕಗಳ ಮಹತ್ತ್ವ, ಸ್ವಪ್ರಜ್ಞೆಯಿಂದ ಶ್ರದ್ಧೆಯು ಜನಿಸುತ್ತದೆ. ನಿಯತಿ ಮತ್ತು ಯೋಚನಾ ಸ್ವಾತಂತ್ರ್ಯ ಪರಸ್ಪರ ಪೂರಕ, ಜಗತ್ತು ಎಷ್ಟು ಸತ್ಯವೋ ಅಷ್ಟೇ ಮಿಥ್ಯ, ಪ್ರಜ್ಞೆ ಮತ್ತು ದೈವಭಕ್ತಿ ಪರಸ್ಪರ ಸಹಚಾರಿಗಳು, ಉದ್ದೇಶರಾಹಿತ್ಯವೇ ಜೀವನದ ಭಾಷೆ, ಸಂತೋಷದ ಗುಟ್ಟು ಸ್ಥಿತಪ್ರಜ್ಞೆ, ಮೌನ ದೈವತ್ವದ ಸಮಗ್ರ ಸಂಕೇತ, ದೈವತ್ವ ನೆಲೆಸುವುದು ಶುದ್ಧ ಸರಳತೆಯಲ್ಲಿ ಸೇರಿದಂತೆ 54 ಲೇಖನಗಳಿವೆ.
ಶ್ರೀಶ ಬೆಳಕವಾಡಿ ಅವರು ಮೂಲತಃ ಬೆಂಗಳೂರಿನವರು. ಮಾಹಿತಿ ತಂತ್ರಜ್ಞಾನದಲ್ಲಿ ಇಂಜಿನಿಯರರು. ಅಧ್ಯಾತ್ಮ ಹಾಗೂ ಅತೀಂದ್ರಿಯ ತಂತ್ರದಲ್ಲಿ ಆಸಕ್ತಿ. ‘ಶೂನ್ಯ’ ಎಂಬ ಕೃತಿ ರಚಿಸಿದ್ದಾರೆ. ಇದಲ್ಲದೇ, ಸಣ್ಣ ಕಥೆ, ಲೇಖನ ಬರೆಯುವುದು, ಸಿನಿಮಾಗಳಿಗೆ ಸ್ಕ್ರಿಪ್ಟ್ ಬರೆಯುವುದು ಇವರ ಹವ್ಯಾಸ. ರೇಖಿ ವಿದ್ಯಾಭ್ಯಾಸಿಗಳು. ಉಪಾಸನಾ ಮತ್ತು ಕುಂಡಲಿನಿ ಧ್ಯಾನಕ್ರಿಯೆಯಲ್ಲೂ ಆಸಕ್ತರು. ...
READ MORE