ರೈತರ ಆತ್ಮಹತ್ಯೆ: ಜಾಗತೀಕರಣದ ಉರುಳಿಗೆ ರೈತರ ಕೊರಳು ಈ ಕಿರು ಹೊತ್ತಿಗೆಯು ರೈತರ ಆತ್ಮಹತ್ಯೆಗಳ ಹಿಂದಿನ ವ್ಯವಸ್ಥೆಯ ಕ್ರೌರ್ಯವನ್ನು ಬಿಚ್ಚಿಡುವಲ್ಲಿ ಒಂದು ಸಣ್ಣ ಪ್ರಯತ್ನ. ರೈತರ ನೋವಿಗೆ ಕಾರಣವೇನು ಎಂಬುದನ್ನು ಈ ಕೃತಿಯು ಚಿಂತನೆಗೆ ಪ್ರೇರೇಪಿಸುತ್ತದೆ. ಮುಖ್ಯವಾಗಿ ರೈತ ವಿಮೋಚನೆಯ ಹೋರಾಟದತ್ತಲೂ ಗಮನ ಸೆಳೆಯುತ್ತದೆ. ಲೇಖಕ ಶಿವಸುಂದರ್ ಅವರು ಕೃತಿಯ ಕರ್ತೃ.
ಚಿಂತಕ, ಬರಹಗಾರ ಶಿವಸುಂದರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ...
READ MORE