ಚಿಮ್ಮಿದ ರಕ್ತ

Author : ಉಮರ್ ಫಾರೂಕ್ ಹೆಚ್.ಎಲ್

Pages 176

₹ 200.00




Year of Publication: 2022
Published by: ನಿರಂಕುಶ ಪ್ರಕಾಶನ
Address: ನಂ.83, 1ನೇ ಫ್ಲೋರ್, ಡಿ ಬ್ಲಾಕ್, ಗುಂಡೂರಾವ್ ಬಿಲ್ಡಿಂಗ್, ಅಗ್ರಹಾರ ದಾಸರಹಳ್ಳಿ, ಬೆಂಗಳೂರು- 560079
Phone: 8123260454

Synopsys

‘ಚಿಮ್ಮಿದ ರಕ್ತ’ ಸ್ವತಂತ್ರ ಭಾರತದ ದಲಿತ ಮತ್ತು ಮುಸ್ಲಿಂ ನರಮೇಧಗಳು ಉಮರ್ ಫಾರೂಕ್ ಹೆಚ್.ಎಲ್ ಅವರು ರಚಿಸಿರುವ ಲೇಖನ ಸಂಕಲನ. ಈ ಕೃತಿಗೆ ಲೇಖಕ, ಚಿಂತಕ ಡಾ. ಬಂಜಗೆರೆ ಜಯಪ್ರಕಾಶ ಅವರ ಮುನ್ನುಡಿ ಬರಹವಿದೆ. ಹಾಗೇ ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಬೆನ್ನುಡಿ ಇದೆ. ಕೃತಿಯ ಕುರಿತು ಬರೆಯುತ್ತಾ ಪ್ರಸ್ತುತ ಸಂದರ್ಭದಲ್ಲಿ, ಭಾರತದ ದಲಿತ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ಬಹುಸಂಖ್ಯಾತರಿಂದಾಗುತ್ತಿರುವ ಹಿಂಸಾಕೃತ್ಯದ ಬಗೆಗಿನ ಉಮರ್ಫಾರೂಕ್ರವರ ಬೌದ್ಧಿಕ ವಿಶ್ಲೇಷಣೆಯು ಹೆಚ್ಚು ಅಗತ್ಯವಿದೆ ಎಂದಿದ್ದಾರೆ ನಟ ಚೇತನ್ ಅಹಿಂಸಾ. ಹಾಗೇ ಇತಿಹಾಸ ಸೂಚಿಸುವಂತೆ, ದಲಿತರು ಮತ್ತು ಮುಸ್ಲಿಮರು ಇಬ್ಬರೂ ಜಾತಿ-ಜನಾಂಗವಾಗಿ ಬಲಿಷ್ಠವಾದ ಸಮಾಂತರ ಲಕ್ಷಣಗಳನ್ನು ಹೊಂದಿದ್ದಾರೆ. ಆದ್ದರಿಂದ ಸಾಂಘಿಕ ಬೆಂಬಲದೊಂದಿಗೆ ಅವರಿಬ್ಬರಲ್ಲಿ ಯಾರೊಬ್ಬರ ವಿರುದ್ಧ ನಡೆಸುವ ನರಮೇಧಗಳು ಹಾಗೂ ಇತರ ವ್ಯವಸ್ಥಿತ ಹಿಂಸಾಕೃತ್ಯಗಳನ್ನು ನೇರವಾಗಿ ಸಂಬಂಧೀಕರಿಸಬಹುದು. ಸಹಸ್ರಾರು ವರ್ಷಗಳಿಂದ ಜಾತಿ ಆಧಾರಿತ ಶ್ರೇಣಿಕೃತ ವ್ಯವಸ್ಥೆಯಿಂದ ದಲಿತರು ಹೇಗೆ ಬಲಿಪಶುಗಳಾಗಿದ್ದಾರೆ ಮತ್ತು ಇಂದಿಗೂ ಹೇಗೆ ವಿವಿಧ ರೂಪಗಳಲ್ಲಿ ಸಾಮಾಜಿಕ ಅನ್ಯಾಯವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಅಧಿಕೃತ ಮೂಲಗಳ ಅಂಕಿ ಅಂಶಗಳು ಬಹಿರಂಗಪಡಿಸುತ್ತವೆ ಎಂದು ತಿಳಿಸಿದ್ದಾರೆ.

About the Author

ಉಮರ್ ಫಾರೂಕ್ ಹೆಚ್.ಎಲ್

ಉಮರ್ ಫಾರೂಕ್ ಹೆಚ್.ಎಲ್ ಮೂಲತಃ ಬಾಗಲಕೋಟೆ ಜಿಲ್ಲೆ ಇಳ್ಕಲ್ ನವರು. ವೃತ್ತಿಯಲ್ಲಿ ಕೃಷಿಕನಾಗಿ, ಪ್ರವೃತ್ತಿಯಲ್ಲಿ ಸಾಮಾಜಿಕ ನ್ಯಾಯದ ಹೋರಾಟಗಾರನಾಗಿರುವ ಉಮರ್‌ ಫಾರೂಕ್ ‘ಚಿಮ್ಮಿದ ರಕ್ತ’ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಕೃತಿ ಖಚಿತ ಅಂಕಿ ಅಂಶಗಳೊಂದಿಗೆ ಸಾಮಾಜಿಕ ಸ್ಥಿತಿ-ಗತಿಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಓದು ಬರಹ ಇವರ ಇಷ್ಟದ ಹವ್ಯಾಸವಾಗಿದೆ. ...

READ MORE

Related Books