ಸಂಕಥನ ಸಿರಿ-ಲೇಖಕ ಬಿ.ಆರ್. ಪೊಲೀಸ ಪಾಟೀಲ ಅವರ ಲೇಖನಗಳ ಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಈಶ್ವರ ಕಾಪಸೆ ಅವರು “ಸುಂದರ ಸರಳ ಭಾಷೆ, ಸಹೃದಯತೆಯುಳ್ಳ “ಸಂಕಥನ ಸಿರಿ” ಓದುವಾಗ ಆತ್ಮೀಯರ ಕೂಡ ಮಾತನಾಡಿದ ಅನುಭವ ನನಗಾಯಿತು. “ಅಂಬೇಡಕರ... ಗುಲಗಂಜಿ, ಮಾರಥಾನ್ ಓಟ, ತಮ್ಮಣ್ಣಪ್ಪ ಚಿಕ್ಕೋಡಿ, ಗುರುತ್ವದ ಮಾದರಿ ಬಸವಣ್ಣ ಪಾ.ಪು.” ಮುಂತಾದವು ಮನ ಮಿಡಿಯುವುದರ ಜೊತೆ, ಇಂದಿನ ಜನಾಂಗಕ್ಕೆ ಜೀವಂತ ಉದಾಹರಣೆಯ ನಮ್ಮ ನಾಡಿನ ಭಾಗ್ಯ! ಸಹೃದಯಕ್ಕೆ ಸ್ಫೂರ್ತಿ ಸೆಲೆ! 'ದುಡಿ ಇಲ್ಲವೆ ಮಡಿ' ಎಂಬ ಸಂದೇಶ ಸಾರುವ ಸಂಕಥನ ಸಿರಿ “ಅರಿವು ಆಚಾರಕ್ಕೆ ಬುನಾದಿ! ಜನಪದ ಜೀವನಕ್ರಮ, ಶಿಕ್ಷಣ, ಸಂಸ್ಕೃತಿ, ಅವ್ವ, ನಿವೃತ್ತಿ-ಪ್ರವೃತಿ, ಆಧುನಿಕ ಜೀವನಶೈಲಿ ಪ್ರಜಾತಂತ್ರ” ಮುಂತಾದವುಗಳು ನಾಗರಿಕತೆ, ಸಂಸ್ಕೃತಿ ವ್ಯತ್ಯಾಸದೊಂದಿಗೆ ಆರೋಗ್ಯಕರ ಬದುಕಿಗೆ ಸಾತ್ವಿಕ, ರಾಜಸಿಕ ಆಹಾರವನ್ನೂ ಹೊಟ್ಟೆ ತುಂಬ ಉಣಿಸುತ್ತವೆ. ಪೊಲೀಸ್ ಪಾಟೀಲರ ನಡೆ-ನುಡಿ ಠೀವಿಯೇ ವಿಶಿಷ್ಟವಾಗಿದೆ” ಎಂದು ಕೃತಿ ಕುರಿತು ಪರಿಚಿಸಿದ್ದಾರೆ.
ಲಾವಣಿ, ತತ್ವಪದ, ಬಯಲಾಟಗಳನ್ನು ಬರೆದು ತಂಡ ಕಟ್ಟಿಕೊಂಡು ಕಳೆದ ನಾಲ್ಕುವರೆ ದಶಕಗಳಿಂದಲೂ ಪ್ರಯೋಗಿಸುತ್ತಾ ಬಂದಿರುವ ಪೊಲೀಸ್ ಪಾಟೀಲ ಅವರ ಹಾಡಿನ ಮೋಡಿಗೆ ತಲೆಬಾಗದವರಿಲ್ಲ. ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನೂರಿಪ್ಪತ್ತು ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. 93 ನಾಟಕಗಳನ್ನು ಇವರು ರಚಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ...
READ MORE