ಮೂಡ್ನಾಕೂಡು ಚಿನ್ನಸ್ವಾಮಿ ಅವರ ಮುನ್ನುಡಿ ಬೆನ್ನುಡಿಗಳ ಸಂಗ್ರಹ ‘ಹೊಸ್ತಿಲ ರಂಗೋಲ’.ಕೃತಿಯ ಪರಿವಿಡಿಯಲ್ಲಿ ಸೂಳೆ ಸಂಕವ್ವೆ, ಮೂರ್ವಾಗ್ರಹ ಮತ್ತು ಕಳಂಕ ಕಳೆಯುವ ಕವಿತೆಗಳು, ಕಾವ್ಯಕನ್ನಿಕೆಯ ಹಣೆಯ ಮೇಲೊಂದು ಚಿನ್ನದ ಬಟ್ಟು, ಚಿನ್ನುಡಿ, ಜೀವಪರ ಚಿಂತನೆ, ಕರಿಯ ಬಿಸಿಲೂ, ಕಲ್ಯಾಣದ ಮಾತೂ…, ಗುರುದೇವರ ಮತ್ತೊಮದು ಮರುಹುಟ್ಟು, ಮಾನಸ ಯಾನ, ಕವಿತೆಯನ್ನು ನಾನು ಎಷ್ಟು ಪ್ರೀತಿಸುತ್ತೇನೆಂದರೆ, ಹೊಸ ಗಾಳಿಯ ಕಂಪು, ಅಲೆ ತಾಕಿದರೆ ದಡ, ನಮ್ಮೂರು.ಕಾಮ್, ಅಕಾ,ಝಗ್ಗನೆ ಬೆಳಕಾಯಿತು!,ಕಾಂತಾ ಸಮ್ಮಿತ ಸೇರಿದಂತೆ 30 ಮುನ್ನುಡಿಗಳು ಹಾಗೂ ಕಾವ್ಯ ವ್ಯಾಖ್ಯಾನ ಕಥನ, ಚತ್ರದ ಬೆನ್ನು, ದಲಿತರ ಬದುಕು, ಹೂ ಕವಿತೆಗಳು, ಕವರ,ಮಸಣದ ಆತ್ಮ, ಕಂಡಾಯ, ನ್ಯಾಣ ಸೇರಿ 20 ಬೆನ್ನುಡಿಗಳ ಸಂಗ್ರಹ ಈ ಕೃತಿಯಲ್ಲಿದೆ. ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ ಬೆನ್ನುಡಿ ‘ಹೊಸ್ತಿಲ ರಂಗೋಲ’ ಕೃತಿಯಲ್ಲಿದೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE