`ಕುಂತ್ರೆ ನಿಂತ್ರೆ ಬೇಂದ್ರೆ’ ಎಮ್. ಎನ್. ಸುಂದರ್‌ರಾಜ್ ಅವರ ಕೃತಿಯಾಗಿದೆ.ಇ ದರಲ್ಲಿ ದ.ರಾ. ಬೇಂದ್ರೆ ಅವರ ಜೀವನದ ಕೆಲವು ಸಂಗತಿಗಳನ್ನು ಸಂದರ್ಭ ಸಹಿತ ವಿವರಿಸಲಾಗಿದೆ. ವೈಯಕ್ತಿಕ ಜೀವನ, ಹಾಸ್ಯ ಘಟನೆಗಳು ಹೀಗೆ ಬೇಂದ್ರೆ ಅಜ್ಜನ ಜೀವನದ ಹಲವು ಸ್ವಾರಸ್ಯಗಳು, ಘಟನೆಗಳು, ಕವನ ಸ್ಪುರಿಸಿದ ಘಳಿಗೆ, ಅನೇಕ ಸಂದರ್ಭಗಳ ಬಗ್ಗೆ ವಿವರವಾಗಿ ಅಲ್ಲವಾದರೂ ಚುಟುಕಾಗಿ ಬರೆದ ಬರಹಗಳು ಇಲ್ಲಿ ಕಾಣಬಹುದು. ಬೇಂದ್ರೆ ಅಜ್ಜನ ಬಗ್ಗೆ ತಿಳಿಯಬೇಕೆನ್ನುವರು ಈ ಪುಸ್ತಕವನ್ನು ಓದಬಹುದು.
ಎಂ.ಎನ್. ಸುಂದರರಾಜ್ ಅವರು ಲೇಖಕರಾಗಿ, ಅಂಕಣಕಾರರಾಗಿ ಪ್ರಸಿದ್ಧರು. ನಿವೃತ್ತ ಆಂಗ್ಲ ಉಪನ್ಯಾಸಕರಾದ ಅವರು ಕವನ, ನಾಟಕ, ಅಂಕಣ ಬರಹ, ಅನುವಾದ, ಸಂಪಾದನೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಇದುವರೆಗೆ ಅವರ ಲೇಖನಿಯಿಂದ ಹದಿನೆಂಟು ಕೃತಿಗಳು ಹೊರಬಂದಿವೆ. ಕನ್ನಡಪ್ರಭದಲ್ಲಿ ಸತತ ಐದು ವರ್ಷಗಳ ಕಾಲ ಹಿರಿಯರ ಹಾದಿ ಎಂಬ ಅಂಕಣವನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆದಿದ್ದರು. ಅಲ್ಲದೇ ಆರು ವರ್ಷಗಳ ಕಾಲ ದೂರದರ್ಶನ ಚಂದನದಲ್ಲಿ ಇವರೇ ಪ್ರತಿದಿನ ನಡೆಸಿಕೊಟ್ಟ ‘ಹೆಜ್ಜೆ ಗುರುತು’ ಕಾರ್ಯಕ್ರಮ ದಾಖಲೆಯನ್ನು ಸೃಷ್ಟಿಸಿತ್ತು. ಹೈದರಾಬಾದಿನ `ಈನಾಡು’ ಪತ್ರಿಕೆಯ ಅಂಕಣಕಾರರೂ ಆಗಿ ಸೇವೆ ಸಲ್ಲಿಸಿರುವ ಸುಂದರ ರಾಜ್ ಇದುವರೆಗೆ ...
READ MORE