'ಅನೇಕಾರ್ಥ' ಡಾ. ಶ್ರೀಶೈಲ ಗೋಲಗೊಂಡ ಅವರ ಮೊದಲ ವಿಮರ್ಶಾ ಸಂಕಲನವಾಗಿದೆ. ಪ್ರಸ್ತುತ ಸಂಕಲನದಲ್ಲಿ ಹನ್ನೊಂದು ಪ್ರಬಂಧಗಳಿವೆ. 'ಹಯವದನ: ಸಂಪ್ರದಾಯ ಮತ್ತು ಆಧುನಿಕತೆ', 'ತುಘಲಕ್: ಸಂಪ್ರದಾಯ ಮತ್ತು ಆಧುನಿಕತೆ', 'ಚಂದ್ರಗಿರಿಯ ತೀರದಲ್ಲಿ: ಒಂದು ಸ್ತ್ರೀವಾದಿ ಅಧ್ಯಯನ', 'ಓಲ್ಲಾ ಅವರ ವಿಮುಕ್ತ', 'ಎಸ್ಕೆ ಕೊನೆಸಾಗರವರ 'ಮೌನಧ್ಯಾನ' ಮತ್ತು 'ದೇವರ ಮಗಳು', 'ಜಗದೀಶ ಹಾದಿಮನಿ ಯವರ ಗೀತನಾಟಕ 'ಬೆರಳಚಂದ್ರ' ಮತ್ತು 'ಇಂಗ್ಲಿಷ್ ಸಾಹಿತ್ಯದಲ್ಲಿ ಸ್ತ್ರೀವಾದ', ಸಂಗಮೇಶ ಬಾಗಲಕೋಟ ಅವರ ಕಥಾ ಸಂಕಲನ 'ಗೊಂಬೆ ಮದುವೆ', ಅಬ್ಬಾಸ ಮೇಲಿನಮನಿ ಅವರ ಕಥೆ 'ಸೂರ್ಯನುರಿದ ಭೂಮಿಗೆ ತಂಪನೆರೆದ ಚಂದಿರ' ಮತ್ತು 'ಸಹೃದಯಿ ಸಂಗನಗೌಡರು' ಎಂಬ ಸಂಸ್ಮರಣ ಗ್ರಂಥದ ಅವಲೋಕನ ಸೇರಿದಂತೆ ಹನ್ನೊಂದು ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಪ್ರಸ್ತುತ ಅನೇಕಾರ್ಥ ಕೃತಿ ವಿಮರ್ಶೆಯ ಹತ್ತು ಲೇಖನಗಳನ್ನು ಒಳಗೊಂಡಿದೆ. ಒಂದು ಕೃತಿಯನ್ನು ಹೊಸ ಹೊಸ ಆಲೋಚನಾ ಕ್ರಮದಲ್ಲಿ ನೋಡಿದರೆ ಸಿಗುವ ಫಲಿತಗಳೇ ಬೇರೆ. ಆ ಕಾರ್ಯ ಇಲ್ಲಿ ಆಗಿದೆ. ಕೃತಿಯನ್ನು ಒಬ್ಬ ವಿಮರ್ಶಕ ಹೇಗೆ ನೋಡಬಹುದು, ಅದರ ಮೂಲ ಆಶಯ ಏನು ಎಂಬುದನ್ನು ಸೂಕ್ಷ್ಮವಾಗಿ ಈ ಪುಸ್ತಕದಲ್ಲಿ ಗುರುತಿಸಿದ್ದಾರೆ.
ಡಾ. ಶ್ರೀಶೈಲ ಗೋಲಗೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳದವರು. 1970 ಜುಲೈ 25ರಂದು ಇವರ ಜನನ. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರೋಣಿಹಾಳದಲ್ಲಿ, ಕೊಲ್ಹಾರದ ಸಂಗಮೇಶ್ವರದಲ್ಲಿ ಪಿ.ಯು, ವಿಜಯಪುರದ ಎಸ್.ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮತ್ತು 1993ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೆಲವು ವರ್ಷ ಇಲಕಲ್ಲ, ಹುನಗುಂದ ಮಹಾ ವಿದ್ಯಾಲಯಗಳು ಮತ್ತು ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್‌ದಲ್ಲಿ ತಾತ್ಕಾಲಿಕ ಇಂಗ್ಲಿಷ್ ಉಪನ್ಯಾಸಕರಾಗಿ, 2005ರಲ್ಲಿ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕೃಪಾಪೋಷಿತ ಸಂಗನಬಸಯ್ಯ ರಾಚಯ್ಯ ವಸ್ತ್ರದ, ...
READ MORE