ಪತ್ರಕರ್ತ ಹಾಗೂ ಲೇಖಕ ಇಂದೂಧರ ಹೊನ್ನಾಪುರ ಅವರ ಲೇಖನಗಳ ಸಂಗ್ರಹ ಕೃತಿ-ಬಿದಿರು ಕೋಲು. ‘ಇದು ಊರುಗೋಲು ಹೌದು, ಬಾರುಕೋಲು ಹೌದು’ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. ಸಾಮಾಜಿಕ ವಿದ್ಯಮಾನಗಳು, ರಾಜಕೀಯ ಇತ್ಯಾದಿ ವಲಯಗಳಲ್ಲಿಯ ವ್ಯವಸ್ಥೆ ಕುರಿತ ಬರಹ-ಚಿಂತನೆಗಳು, ಸಕಾರಾತ್ಕಕವಾಗಿ ಸ್ವೀಕರಿಸಿದರೆ ಆರೋಗ್ಯಕಾರಿ ಸಮಾಜ ನಿರ್ಮಾಣದಲ್ಲಿ ಊರುಗೋಲಾಗಿ ಪ್ರೇರಣೆ ನೀಡುತ್ತವೆ. ತಪ್ಪಿದಲ್ಲಿ, ವ್ಯವಸ್ಥೆಯ ಲೋಪದೋಷಗಳ ಮೇಲೆ ಚಾಟಿ ಬೀಸುವ ಕೆಲಸ ಮಾಡುತ್ತವೆ. ಹೀಗೆ ಆರೋಗ್ಯಕರ ಸಮಾಜ ನಿರ್ಮಾಣದತ್ತ ಕೇಂದ್ರೀಕರಿಸಿರುವ ವಿಷಯ ವಸ್ತುಗಳು ಕೃತಿಯ ಕೇಂದ್ರವಾಗಿವೆ.
ಲೇಖಕ ಇಂದೂಧರ ಹೊನ್ನಾಪುರ ಅವರು ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ಗ್ರಾಮದವರು. ಮೈಸೂರಿನ ಕಾಲೇಜಿನಲ್ಲಿ ಪತ್ರಿಕೋದ್ಯಮದ ಪದವೀಧರರು. ವಿದ್ಯಾರ್ಥಿ ದಿಸೆಯಲ್ಲೇ 'ಪಂಚಮ' ಪತ್ರಿಕೆ ಪ್ರಕಟಿಸಿ, ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಪಿರಿಯಾಪಟ್ಟಣದಲ್ಲಿ ನಡೆದ 16ನೇ ಮೈಸೂರು ಜಿಲ್ಲಾ ಕನ್ನಡ (2018) ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿಗಳು ಲಭಿಸಿವೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿದೆ. ಜಲಕಲ್ಯಾಣ ಟ್ರಸ್ಟ್ ಅಧ್ಯಕ್ಷರಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ನೀಡುತ್ತಿದ್ದಾರೆ. ...
READ MORE