‘ಮಹಿಳೆ ಮತ್ತು ಸಮೂಹ ಮಾಧ್ಯಮಗಳು’ ಕೆ. ಸರೋಜಾ ಅವರ ರಚನೆಯ ಲೇಖನಗಳ ಸಂಗ್ರಹವಾಗಿದೆ. ಮಹಿಳೆಯರ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುವ ವಿಷಯಗಳು ಕೆಲವೊಮ್ಮೆ ಆಕೆಗೆ ಪ್ರತಿಕೂಲವಾಗಿ ಪರಿಣಮಿಸುವುದೂ ಇದೆ. ಜಾಹಿರಾತುಗಳಂತೂ ಅಸಹ್ಯಕರ ರೀತಿಯಲ್ಲಿ ವ್ಯಾಪಾರಿ ಮನೋಭಾವನೆ ಹೊಂದಿರುತ್ತವೆ. ಅನೇಕ ಮಾಧ್ಯಮಗಳ ಕಾರ್ಯಕ್ರಮ ಲೇಖನಗಳನ್ನು ಅವಲೋಕಿಸಿ, ವಿಷಯ ಸಂಗ್ರಹಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಸ್ತ್ರೀಯರ ನೈಜ ಕಾಳಜಿಯ ಬಗ್ಗೆ ಆಲೋಚಿಸುವ, ಗುರುತಿಸುವ ಕೊರತೆಯೊಂದನ್ನು ಸರಿಪಡಿಸಲು ಸಲಹೆಗಳು ಇಲ್ಲಿ ಸಾಕಷ್ಟು ಇವೆ.
ಡಾ. ಕೆ. ಸರೋಜಾ, ಮೈಸೂರಿನ ಮಾನಸಗಂಗೋತ್ರಿ ಹಾಗೂ ಧಾರವಾಡದ ಕಷಿ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ICARನಿಂದ ಇವರಿಗೆ ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಬಂದಿದೆ. ತಮ್ಮ ದೀರ್ಘಾವಧಿಯ ಬೋಧನಾನುಭವದಲ್ಲಿ ವಿದ್ಯಾರ್ಥಿ ವರ್ಗದಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್‌ನಲ್ಲಿರುವ ಅನೇಕ ಪರಿಕಲ್ಪನೆಗಳು (concepts) ಸ್ಪಷ್ಟವಾಗಿ ಪೂರ್ತಿ ತಿಳಿಯಲಾಗದೇ ಇರುವುದನ್ನು ಗಮನಿಸಿ ತರಗತಿಗಳಲ್ಲಿ ಅವುಗಳನ್ನೆಲ್ಲಾ ಕನ್ನಡದಲ್ಲಿ ಉದಾಹರಣಾ ಸಹಿತ ಚಿತ್ರವತ್ತಾಗಿ ಬೋಧಿಸುತ್ತಾ ಇವರು ವಿದ್ಯಾರ್ಥಿ ಸಮೂಹಗಳಲ್ಲಿ ಜನಪ್ರಿಯರಾಗಿದ್ದವರು. ತಾವು ಬೋಧಿಸುತ್ತಿದ್ದ ಮಾನವ ವಿಕಾಸ (Human Development) ಶಾಖೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಂದಿಗೂ ಅಧ್ಯಯನ ಮಾಡುತ್ತಲೇ ಇದ್ದಾರೆ. ಇವರ ಮೊದಲ ...
READ MOREಹೊಸತು - ಫೆಬ್ರವರಿ -2005
ಸಮೂಹ ಮಾಧ್ಯಮಗಳ ಮೂಲಕ ಸ್ತ್ರೀಪರ ಕಾಳಜಿಗಳನ್ನು ಹೇಗೆ ಪ್ರಚುರಪಡಿಸಬಹುದೆಂಬ ಅಂಶ ಈ ಲೇಖನಗಳಲ್ಲಿ ವ್ಯಕ್ತವಾಗಿದೆ. ಪತ್ರಿಕೆ, ದೂರದರ್ಶನಗಳಂಥ ಪ್ರಭಾವಶಾಲಿ ಮಾಧ್ಯಮಗಳು ಮಹಿಳೆಯ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಪ್ರಚಾರವನ್ನು ನೀಡುತ್ತಿಲ್ಲವೆಂಬುದೇ ಇಲ್ಲಿನ ಬಲವಾದ ಆರೋಪ. ಮಹಿಳೆಯರ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುವ ವಿಷಯಗಳು ಕೆಲವೊಮ್ಮೆ ಆಕೆಗೆ ಪ್ರತಿಕೂಲವಾಗಿ ಪರಿಣಮಿಸುವುದೂ ಇದೆ. ಜಾಹಿರಾತುಗಳಂತೂ ಅಸಹ್ಯಕರ ರೀತಿಯಲ್ಲಿ ವ್ಯಾಪಾರಿ ಮನೋಭಾವನೆ ಹೊಂದಿರುತ್ತವೆ. ಅನೇಕ ಮಾಧ್ಯಮಗಳ ಕಾರ್ಯಕ್ರಮ ಲೇಖನಗಳನ್ನು ಅವಲೋಕಿಸಿ, ವಿಷಯ ಸಂಗ್ರಹಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಸ್ತ್ರೀಯರ ನೈಜ ಕಾಳಜಿಯ ಬಗ್ಗೆ ಆಲೋಚಿಸುವ, ಗುರುತಿಸುವ ಕೊರತೆಯೊಂದನ್ನು ಸರಿಪಡಿಸಲು ಸಲಹೆಗಳು ಇಲ್ಲಿ ಸಾಕಷ್ಟು ಇವೆ. ಮಹಿಳಾ ಅಧ್ಯಯನಕ್ಕೆ ಒಂದು ಆಕರ ಗ್ರಂಥ.