ಕರ್ನಾಟಕ ಸಬಾಲ್ಟ್ರನ್ ಓದು ಮಾಲಿಕೆಯಲ್ಲಿ ಪ್ರಕಟವಾದ ಕೃತಿ ‘ರೈತ-ಕಾರ್ಮಿಕ ಓದು’ ಈ ಮಾಲಿಕೆಯ ಯೋಜನಾ ಸಂಪಾದಕರು ಡಾ. ಮೇಟಿ ಮಲ್ಲಿಕಾರ್ಜುನ, ಸಂಪಾದಕರು ಡಾ.ಆರ್. ಚಲಪತಿ ಹಾಗೂ ಡಾ. ವಿಠ್ಠಲ್ ಭಂಡಾರಿ.
ಏಕಮುಖ ಚಲನೆಯಿಂದ ಚರಿತ್ರೆ ಎಂಬುದು ಕೇವಲ ಚಾರಿತ್ರಿಕ ವಿವರಗಳನ್ನು ಮಂಡಿಸುವ ಬಗೆಯಾಗಿದೆ. ಈ ಚಾರಿತ್ರಿಕ ವಿನ್ಯಾಸಗಳನ್ನು ಮರು ವಿನ್ಯಾಸಗೊಳಿಸುವ ಮೂಲಕ ಚರಿತ್ರೆ ಎಂಬುದು ಸಾಂಸ್ಕೃತಿಕ ಅಸ್ಮಿತೆ, ನೆನಪಿನ ರಾಜಕಾರಣ, ಜಾತಿ ಬಗೆಗಿನ ನಂಬಿಕೆಗಳು, ಲಿಂಗ ರಾಜಕಾರಣದ ವಿನ್ಯಾಸಗಳು, ಸಮೂಹಗಳ ಶ್ರಮ ಸಂಸ್ಕೃತಿಯ ವಿಭಜನೆಯ ನಡುವಣ ಅಸಮಾನತೆಗಳನ್ನು ಗುರುತಿಸುವ ನಿಲುವುಗಳು ಎಂಬಿತ್ಯಾದಿ ಕುರಿತು ಚಿಂತಿಸುವ ಹೊಣೆಗಾರಿಕೆ ಆಗಬೇಕಿದೆ.
ಪ್ರಸ್ತುತ ಕೃತಿ ‘ರೈತ ಕಾರ್ಮಿಕ ಓದು’ ವಿಷಯದ ಬಗ್ಗೆ ರಚಿತವಾಗಿರುವ ಉಪಯುಕ್ತ ಗ್ರಂಥ.
ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...
READ MORE