ಮೂಡ್ನಾಕೂಡು ಚಿನ್ನಸ್ವಾಮಿ ಅವರ ’ಅಂಬೇಡ್ಕರ್ ಅನುಸಂಧಾನ’ ಕೃತಿಯು ಲೇಖನಸಂಕಲನವಾಗಿದೆ. ಇಲ್ಲಿ ಲೇಖಕರು ಅಂಬೇಡ್ಕರ್ ಅವರ ಮಾತುಗಳನ್ನೇ ಬೆನ್ನುಡಿಯಾಗಿ ಬಳಸಿಕೊಂಡಿದ್ದಾರೆ. ಬಿ. ಆರ್ ಅಂಬೇಡ್ಕರ್ ಅವರ ಪ್ರಕಾರ ’ ಒಂದು ರಾಷ್ಟ್ರ ಎಂದು ನಂಬುವುದೇ ಒಂದು ಮಹಾ ಭ್ರಮೆಯನ್ನು ಘೋಷಿಸಿದಂತೆ. ಸಾವಿರಾರು ಜಾತಿಗಳಲ್ಲಿ ಚದುರಿಹೋಗಿರುವ ಜನರು ಹೇಗೆ ಒಂದು ರಾಷ್ಟ್ರವಾಗುತ್ತಾರೆ? ಸಾಮಾಜಿಕ ಮತ್ತು ಮನಶಾಸ್ತ್ರೀಯ ಅರ್ಥಕ್ಕನುಸಾರವಾಗಿ ನಾವಿನ್ನೂ ರಾಷ್ಟ್ರವಾಗಿಲ್ಲ ಎಂಬುದನ್ನು ಎಷ್ಟು ಬೇಗ ಅರಿತಿಕೊಳ್ಳತ್ತೆವೆಯೋ ಅಷ್ಟು ನಮಗೆ ಒಳ್ಳೆಯದು. ಆಗ ಮಾತ್ರ ನಾವು ಒಂದು ರಾಷ್ಟ್ರವಾಗುವ ಅಗತ್ಯತೆಯನ್ನು ಮನಗಾಣಬಹುದು ಮತ್ತು ಗುರಿ ಸಾಧಿಸುವ ಮಾರ್ಗದತ್ತ ಸಾಗಬಹುದು. ಆದರೆ ಗುರಿ ಸಾಧನೆ ಬಹಳ ಕಷ್ಟ. ಎಷ್ಟು ಕಷ್ಟವೆಂದರೆ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕಿಂತಲೂ ಬಹಳ ಕಷ್ಟ. ಅಲ್ಲಿ ಜಾತಿ ಸಮಸ್ಯೆಯಿಲ್ಲ. ಭಾರತದಲ್ಲಿ ಜಾತಿಗಳಿವೆ, ಜಾತಿ ರಾಷ್ಟ್ರವಿರೋಧಿಯಾದದ್ದು, ಮೊದಲಿಗೆ ಅದು ಸಾಮಾಜಿಕ ಜೀವನದಲ್ಲಿ ಅಂತರವನ್ನು ಉಂಟುಮಾಡುತ್ತದೆ ಎನ್ನುವುದಾಗಿದೆ.
ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...
READ MORE